ಭಕ್ತಿಯಿಂದ ಬರುವವರಿಗೆ ರಾಯರ ಅನುಗ್ರಹ ಪ್ರಾಪ್ತಿ

byn
Published on

ಬೈಂದೂರು: ಮಂತ್ರಾಲಯಕ್ಕೆ ಹೋಗಲಾರದವರು ಈ ಕಿರು ಮಂತ್ರಾಲಯಕ್ಕೆ ಬಂದು ರಾಘವೇಂದ್ರ ಸ್ವಾಮಿಗಳ ಸೇವೆ ಮಾಡಿದರೆ ಅಲ್ಲಿಯ ಸೇವೆಯ ಫಲ ಇಲ್ಲಿಯೂ ಸಿಗಲಿದೆ. ಶ್ರದ್ಧಾ ಭಕ್ತಿಯಿಂದ ಬರುವ ಎಲ್ಲ ಭಕ್ತಾದಿಗಳಿಗೂ ರಾಯರು ಅನುಗ್ರಹ ಮಾಡುತ್ತಾರೆ. ಎಂದು ಮಂಗಳೂರು ಚಿತ್ರಾಪುರ ಮಠದ ವಿದ್ಯೇಂದ್ರತೀರ್ಥ ಶ್ರೀಪಾದರು ಹೇಳಿದರು.

ಇಲ್ಲಿನ ವತ್ತಿನಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ (ಕಿರು ಮಂತ್ರಾಲಯ) ಶ್ರೀ ಗುರು ಸಾರ್ವಭೌಮರ ವೃಂದಾವನ ಪುನಃಪ್ರತಿಷ್ಠಾಪನೆ, ವೃಂದಾವನಕ್ಕೆ ಶತಕಲಶಸಹಿತ ಬ್ರಹ್ಮಕಲಶೋತ್ಸವ ನೆರವೇರಿಸಿ, ಆಶೀರ್ವಚನ ನೀಡಿದರು.

ಪುತ್ತಿಗೆ ಮಠದ ಸಂಸ್ಥಾನ ವಿದ್ವಾಂಸ ಕುತ್ಯಾರು ಕೇಂಜಿ ಶ್ರೀಧರ ತಂತ್ರಿ, ಕ್ಷೇತ್ರದ ಅರ್ಚಕ ಮುರಳೀಧರ ನಾವಡ ಹಾಗೂ ರಾಘವೇಂದ್ರ ಸ್ವಾಮಿ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೇವಳಕ್ಕೆ ಧನಸಹಾಯ ಮಾಡಿದ ದಾನಿಗಳನ್ನು ಗೌರವಿಸಲಾಯಿತು. ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕರ್ಣಾಟಕ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ವಾದಿರಾಜ ಕೆ., ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್, ಉದ್ಯಮಿಗಳಾದ ಹಳ್ನಾಡ್ ಭೋಜರಾಜ ಶೆಟ್ಟಿ, ದಿನೇಶ ಪೂಜಾರಿ, ಲೋಕೇಶ ಕುಲಾಲ್, ಈರಪ್ಪ ನಾಯ್ಕ ಭಟ್ಕಳ, ದಾಸನಾಡಿ ವೆಂಕಟ್ರಮಣ ದೇವಸ್ಥಾನ ಅಧ್ಯಕ್ಷ ಎಸ್.ನಾಗಯ್ಯ ಶೆಟ್ಟಿ ಹೊಸ್ಮನೆ, ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ಸುರೇಶ ಬಟವಾಡಿ, ತಾಪಂ ಮಾಜಿ ಸದಸ್ಯ ರಾಮ ಸೋಡಿತಾರ್, ಮಹಾಕಾಳಿ ದೇವಸ್ಥಾನ ಅಧ್ಯಕ್ಷ ನಂದಕಿಶೋರ್, ಜೋಗೂರು ದೇವಸ್ಥಾನ ಅಧ್ಯಕ್ಷ ಅಣ್ಣಪ್ಪ, ತಗ್ಗರ್ಸೆ ದೈವಸ್ಥಾನ ಅಧ್ಯಕ್ಷ ಅಕ್ಷಯ ನಾರಾಯಣ ಇದ್ದರು.

ರಾಘವೇಂದ್ರ ಸ್ವಾಮಿ ಟ್ರಸ್ಟ್ ಉಪಾಧ್ಯಕ್ಷ ಎಸ್.ರಾಜು ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಮಂಜುನಾಥ ಶೆಟ್ಟಿ ವಂದಿಸಿದರು. ಶಿಕ್ಷಕ ಸುಧಾಕರ ಪಿ. ಕಾರ್ಯಕ್ರಮ ನಿರ್ವಹಿಸಿದರು.

ಸಂಜೆ ಕಾರ್ಕಳದ ಶ್ರೀದೇವಿ ಲಲಿತ ಕಲಾವೃಂದದಿಂದ ಯಕ್ಷಗಾನ ಪ್ರದರ್ಶನಗೊಂಡಿತು. ಧಾರ್ಮಿಕ ಕಾರ್ಯದ ಕೊನೆಯ ದಿನವಾದ ಗುರುವಾರ ಧಾರಾಕಾರ ಮಳೆಯ ನಡುವೆಯೂ ಸಾವಿರಾರು ಮಂದಿ ಭಕ್ತರು ವತ್ತಿನೆಣೆ ಕಿರು ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು. ಭಕ್ತರಿಗೆ ತೊಂದರೆಯಾಗದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರು.

ಕಷ್ಟದಿಂದ ಬಿಡುಗಡೆ ಸಿಗಬೇಕಾದರೆ ಗುರುವಿನ ಅನುಗ್ರಹ ದೊರೆಯಬೇಕು. ನಿಷ್ಕಲ್ಮಶ ಭಕ್ತಿಯಿಂದ ರಾಯರನ್ನು ನೆನೆದಾಗ ಅನುಗ್ರಹ ಪ್ರಾಪ್ತಿಯಾಗುತ್ತದೆ. ಇಂತಹ ಸಾವಿರಾರು ನಿದರ್ಶನಗಳು ನಿತ್ಯ ನಡೆಯುತ್ತಿದೆ. ವತ್ತಿನೆಣೆ ಕಿರುಮಂತ್ರಾಯ ಪಾಕೃತಿಕ ವಿಶೇಷತೆ ಹೊಂದಿದ್ದು, ಈ ಕ್ಷೇತ್ರದ ಅಭಿವೃದ್ಧಿ ಮೂಲಕ ಬೈಂದೂರು ಇನ್ನಷ್ಟು ಪ್ರಗತಿ ಕಾಣಲಿದೆ. -ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಮಾಜಿ ಶಾಸಕ https://www.vijayavani.net/the-outdoor-port-like-a-tree-in-danger https://www.vijayavani.net/gantihole-demands-appointment-of-permanent-teachers

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net