ಆಕ್ರಮ ಗಣಿಗಾರಿಗೆ ಮಾಡಿದವರಿಗೆ ಶಿಕ್ಷೆಯಾಗಿದೆ

SHIVARAJ S THANGADAGI
SHIVARAJ S THANGADAGI
Published on

 ರಾಯಚೂರು ಅಕ್ರಮ ಗಣಿಗಾರಿಕೆ ಮಾಡಿದವರಿಗೆ ನ್ಯಾಯಾಲಯ ತರ‍್ಪೂ ನೀಡಿದ್ದು. ಕೆಲವರಿಗೆ ಶಿಕ್ಷೆಯಾಗಿ ಜೈಲಿಗೂ ಹೋಗಿದ್ದಾರೆಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.

ನಗರದಲ್ಲಿ ಶಣಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದನ ಹಿತರಕ್ಷಣೆಗಾಗಿ ಸಿಎಂ ಅವರಿಗೆ ಪತ್ರ ಬರೆದಿರುವೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿರುವುದು ಸತ್ಯವಾಗಿದೆ. ಈಗಾಗಲೇ ಬಳ್ಳಾರಿ ಗಣಿಗಾರಿಕೆ ವಿಚಾರದಲ್ಲಿ ಶಿಕ್ಷೆಯಾಗಿದೆ. ಬಿಜೆಪಿ ರ‍್ಕಾರದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಸಂತೋಷ್ ಹೆಗಡೆ ಲೋಕಾಯುಕ್ತರಾಗಿದ್ದಾಗ ವರದಿ ನೀಡಿದ್ದರು. ಬಿಜೆಪಿ ಅವರು ಯಾವ ರೀತಿಯಲ್ಲಿ ಭ್ರಷ್ಟಾಚಾರ ಮಾಡಿದ್ದರು ಎನ್ನುವುದು ತಿಳಿದಿದೆ. ಈ ವಿಚಾರ ದೇಶದ ಜನರಿಗೆ ಗೊತ್ತಿದೆ. ಆದರೆ ಕಾನೂನು ಅದನ್ನು ಕ್ರಮವಹಿಸುವಂತ ಕೆಲಸ ಮಾಡಬೇಕು ಎಂದರು.

ನಮ್ಮ ಪಕ್ಷದ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. ಎಲ್ಲರೂ ಬಹಳ ಆರಾಮಾಗಿದ್ದೀವಿ. ನಾವು ಕೊಟ್ಟ ಮಾತು, ಐದು ಭರವಸೆಗಳನ್ನ ಶೇ.೧೦೦ ರಷ್ಟು ಪರ‍್ಣಗೊಳಿಸಿದ್ದೇವೆ. ವಿರೋಧ ಪಕ್ಷದವರು ಸುಮ್ಮನೆ ಕಾಂಗ್ರೆಸ್ ಶಾಸಕರದಲ್ಲಿ ಅಸಮಾಧಾನವಿದೆಂದು ಹೇಳುತ್ತಿದ್ದಾರೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net