ಹಲ್ಲೆ ನಡೆಸಿದವರನ್ನು ಗಡಿಪಾರು ಮಾಡಿ

25Kdr2
Published on

ಕಡೂರು: ವಿಜಯಪುರ ಜಿಲ್ಲೆಯ ಗಾಂಧಿನಗರ ಚೌಕದ ಇಟ್ಟಿಗೆ ಭಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಮಖಂಡಿ ತಾಲೂಕಿನ ಚಿಕ್ಕಲಿಗ ಗ್ರಾಮದ ಮೂವರು ಕಾರ್ಮಿಕರಿಗೆ ಅಮಾನುಷವಾಗಿ ಥಳಿಸಿ ರಾಕ್ಷಸ ಪ್ರವೃತ್ತಿ ಮೆರೆದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಮಾದಿಗ ಸಮಾಜದ ಸದಸ್ಯರು ಸಾಂಕೇತಿಕ ಪ್ರತಿಭಟನೆ ನಡೆಸಿ ತಾಲೂಕು ಕಚೇರಿ ಆವರಣದಲ್ಲಿ ಪ್ರಭಾರ ತಹಸೀಲ್ದಾರ್ ಮಂಜುನಾಥಸ್ವಾಮಿಗೆ ಮನವಿ ಸಲ್ಲಿಸಿದರು.

ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಿದ್ದ ಕಾರ್ಮಿಕರು ತಡವಾಗಿ ಕೆಲಸಕ್ಕೆ ಬಂದಿದ್ದರಿಂದ ಇಟ್ಟಿಗೆ ಭಟ್ಟಿಯ ಮಾಲೀಕರು ಮೂರು ದಿನ ಗೃಹ ಬಂಧನದಲ್ಲಿಟ್ಟು ಅಮಾನುಷವಾಗಿ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ. ಸಮಾಜದ ಮುಖಂಡರು ಖಂಡಿಸಿ ಅಂತಹ ಆರೋಪಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.

ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಜಗದೀಶ್, ಸಮಾಜದ ಮುಖಂಡರಾದ ಬಿ.ಟಿ.ಚಂದ್ರಶೇಖರ್, ನಾರಾಯಣಮೂರ್ತಿ, ತಮ್ಮಯ್ಯ, ಸಿ. ಶಿವಣ್ಣ, ಬೀರೂರು ಎನ್.ಗಿರೀಶ್, ರಾಘವೇಂದ್ರ, ಕೇದಿಗೆರೆ ಬಸವರಾಜ್, ಬಾಣೂರು ಸುರೇಶ್, ಪಟ್ಟಣಗೆರೆ ಸಗನಪ್ಪ, ಹುಲ್ಲೇಹಳ್ಳಿ ಲಕ್ಷತ್ಮಣ್, ಗಣೇಶ್, ವಿನೋದ್, ನಾಗರಾಜ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net