ಸಮಾಜದಿಂದ ಪುರಸ್ಕಾರ ಪಡೆದವರೆ ಪುಣ್ಯವಂತರು

26KMT1_Namadhari2
Published on

ಕುಮಟಾ: ಪ್ರತಿಭಾವಂತ ಮಕ್ಕಳು ಆರ್ಥಿಕ ಸಮಸ್ಯೆಯಿಂದ ತಮ್ಮ ಶೈಕ್ಷಣಿಕ ಗುರಿಯಿಂದ, ಅವಕಾಶಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಮಾಜ ಸಂಘಟನೆಗಳು ಈಗೀಗ ಹೆಚ್ಚೆಚ್ಚು ಬೆಂಬಲವಾಗಿ ನಿಲ್ಲುತ್ತಿವೆ. ಸಮಾಜದ ಪುರಸ್ಕಾರಕ್ಕೆ ಪಾತ್ರರಾದವರು ನಿಜಕ್ಕೂ ಪುಣ್ಯವಂತರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಶನಿವಾರ ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸಮಾಜಕ್ಕಾಗಿ ತ್ಯಾಗ, ಸೇವೆ ಮಾಡಿದ ಡಾ. ಎಂ.ಡಿ. ನಾಯ್ಕ ಅಂತಹವರ ಸದಾ ಸ್ಮರಣೆಯಾಗಬೇಕು. ಯುವ ಪೀಳಿಗೆ ತಮ್ಮ ಜವಾಬ್ದಾರಿ ಹೊರಬೇಕು ಎಂದರು.

ಕಾರ್ಯಕ್ರಮದಲ್ಲಿ ಸಚಿವ ಮಂಕಾಳು ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ವಿಶೇಷ ಒಲಿಂಪಿಕ್​ನಲ್ಲಿ ಚಿನ್ನದ ಪದಕ ವಿಜೇತ ವಿಘ್ನೕಶ ಆರ್. ನಾಯ್ಕ, ಸಾಂಸ್ಕೃತಿಕ ಕ್ಷೇತ್ರದ ಸಾಧಕ ಬಾಬು ಶಿವಪ್ಪ ನಾಯ್ಕ ಹಾಗೂ ಯಕ್ಷಗಾನ ಭಾಗವತ ಕೋಡ್ಕಣಿಯ ಗಣಪತಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ನಾಮಧಾರಿ ತಾಲೂಕಾಧ್ಯಕ್ಷ ಮಂಜುನಾಥ ಆರ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಉಪಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕ, ಬೆಣ್ಣೆ ಸರ್ಕಾರಿ ಕಾಲೇಜು ಪ್ರಭಾರಿ ಪ್ರಾಚಾರ್ಯ ಆರ್.ಎಚ್. ನಾಯ್ಕ, ನಿವೃತ್ತ ಪೊ›. ಎಂ.ಜಿ. ನಾಯ್ಕ, ವಕೀಲರ ಸಂಘದ ಅಧ್ಯಕ್ಷೆ ಮಮತಾ ನಾಯ್ಕ, ಜೆಡಿಎಸ್ ಮುಖಂಡ ಸೂರಜ ನಾಯ್ಕ, ರತ್ನಾಕರ ನಾಯ್ಕ, ಆರ್ಯ ಈಡಿಗ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್. ನಾಯ್ಕ, ಎಚ್. ಆರ್. ನಾಯ್ಕ, ಎನ್.ಆರ್. ನಾಯ್ಕ, ಭಾರತಿ ನಾಯ್ಕ, ಮುಕ್ತಾ ನಾಯ್ಕ, ಯುವ ನಾಮಧಾರಿ ಅಧ್ಯಕ್ಷ ರಾಜೇಶ ನಾಯ್ಕ ಇದ್ದರು. ಶಿಕ್ಷಕ ಮಂಜುನಾಥ ನಾಯ್ಕ, ಅರುಣ ನಾಯ್ಕ, ರಾಘವೇಂದ್ರ ನಾಯ್ಕ, ಆರ್.ಜಿ. ನಾಯ್ಕ, ಸುಧೇಶ ನಾಯ್ಕ, ಗೀತಾ ನಾಯ್ಕ, ಪ್ರಶಾಂತ ನಾಯ್ಕ ಹೆಬೈಲ, ಕಮಲಾಕರ ನಾಯ್ಕ, ವೈಭವ ನಾಯ್ಕ, ರೇಖಾ ನಾಯ್ಕ, ದತ್ತಾತ್ರಯ ನಾಯ್ಕ, ಕಿರಣ ನಾಯ್ಕ ಇತರರಿದ್ದರು.

ಆಸ್ಪತ್ರೆ ನಿರ್ವಣಕ್ಕೆ ಪ್ರಯತ್ನ

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಪ್ರಸ್ತಾಪಿಸಿದ ಸಚಿವ ವೈದ್ಯ, ಈ ವಿಚಾರದಲ್ಲಿ ಈ ಹಿಂದಿನವರು ಏನು ಮಾಡಿ ಹೋದರು, ನಂತರ ಏನಾಗಿದೆ ಎಂದು ರಾಜಕೀಯ ಮಾಡುವುದಿಲ್ಲ. ಆಸ್ಪತ್ರೆ ನಿರ್ವಣಕ್ಕೆ ಪ್ರಯತ್ನ ಮಾಡುತ್ತೇನೆ ಎಂದರು. ಅಲ್ಲದೇ, ನಾಮಧಾರಿ ಸಂಘದಿಂದ ಶೈಕ್ಷಣಿಕ ಉದ್ದೇಶಕ್ಕಾಗಿ ಕೇಳಲಾದ 3 ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರಿ ಮಾಡಿಕೊಡುತ್ತೇನೆ. ಉದ್ದೇಶಿತ ವಿದ್ಯಾರ್ಥಿ ನಿಲಯ ನಿರ್ವಣಕ್ಕೂ 50 ಲಕ್ಷ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net