ಪರಿಸರ ಕಾಳಜಿ ಇದ್ದವರು ಸೂಕ್ಷ್ಮ ಸಂವೇದಿಗಳು -ನಾಗರಾಜ ನಾಯಕ

Madeva-Janaseva-Kendra
Published on

ಕಾರವಾರ:
ಮನುಷ್ಯರ ಜತೆ ಪಶು, ಪಕ್ಷಿ, ಗಿಡ, ಮರ ಪರಿಸರಗಳ ಬಗ್ಗೆ ಯಾರು ಕಾಳಜಿ ಹೊಂದಿದ್ದಾರೋ ಅಂಥವರು ಸೂಕ್ಷ್ಮ ಸಂವೇದನೆ ಹೊಂದಿದ ಜೀವಿಗಳು ಎಂದು ವಕೀಲ, ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.
ತಾಲೂಕಿನ ಗೌರಿ ಮಹದೇವ ಕೃಪ ಸಾಂತ್ವನ ಜನ ಸೇವಾ ಕೇಂದ್ರದ 9ನೇ ವರ್ಷದ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿದ್ದ ಶ್ರೀಕಾಂತ ನಾಯ್ಕ ಅವರು ಅಲ್ಲಿ ಜನಪರ ಕಾರ್ಯಗಳಿಂದ ಜನರಿಗೆ ಹತ್ತಿರವಾದರು. ನಿವೃತ್ತಿಯಾದ ನಂತರವೂ ಅವರ ಸಾಮಾಜಿಕ ಕಳಕಳಿಗೆ ಯಾರೂ ಸರಿಸಾಟಿಯಿಲ್ಲ ಎಂದರು.

ಇದನ್ನೂ ಓದಿ: ಹೊಸ ಅಧ್ಯಕ್ಷರಾದ ದಿನವೇ ಗ್ರಾಪಂಗೆ ಬೀಗ!!
ಸಾಹಿತಿ, ಮಿಮಿಕ್ರಿ ಕಲಾವಿದ ವಸಂತ ಬಾಂದೇಕರ್, ಶ್ರೀಕಾಂತ ನಾಯ್ಕ ಅವರು ಅನಾಥರ, ಅಂಗವಿಕಲರ ಶವಗಳ ಸಂಸ್ಕಾರ ಕಾರ್ಯ ಮಾಡುತ್ತಿದ್ದಾರೆ ಎಂದರು.

ಬಿ.ಆರ್.ಅಂಬೇಡ್ಕರ್ ನಿಗಮದ ನಿವೃತ್ತ ವ್ಯವಸ್ಥಾಪಕಿ ವಿಮಲಾ ನಾಯಕ, ನಿವೃತ್ತ ಮಕ್ಕಳ ರಕ್ಷಣಾಧಿಕಾರಿ ಯಶೋಧಾ ಹೆಗಡೆ, ರಾಜೇಶ ನಾಯಕ, ನಗರಸಭೆ ಸದಸ್ಯ ಪ್ರಕಾಶ ನಾಯಕ, ನಿವೃತ್ತ ಇನ್ಸ್‌ಪೆಕ್ಟರ್‌ ಶಿವಾನಂದ ಮೇತ್ರಿ, ವಿಜಯ್ ಕಿಂದಳಕರ್ ಮಾತನಾಡಿದರು.

ಶ್ರೀಕಾಂತ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಡಿ.ಜೆ.ನಾಯಕ ಸ್ವಾಗತಿಸಿದರು. ಉಪನ್ಯಾಸಕ ಗಣಪತಿ ಪಟಗಾರ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಉಪ ತಹಸೀಲ್ದಾರ್. ಜಿ.ಎಸ್.ನಾಯ್ಕ ಅವರು ನಾಗರಾಜ ನಾಯಕ ಅವರನ್ನು ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net