

ಮಂಗಳೂರು: ಬೈಂದೂರಿನ ಸೇನಾಪುರ - ಮಂಗಳೂರು ಹೊರವಲಯದ ತೋಕೂರು ರೈಲು ನಿಲ್ದಾಣಗಳ ನಡುವಿನ ಇಲಾಖೆ ಸೊತ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 20ರಂದು ಅಪರಾಹ್ನ 3ರಿಂದ 6 ಗಂಟೆ ತನಕ ಮೆಗಾ ಬ್ಲಾಕ್ ಇರಲಿದೆ. ಪರಿಣಾಮ ಈ ಮಾರ್ಗದಲ್ಲಿ ಸಂಚರಿಸಲಿರುವ ರೈಲು ಸಂಚಾರ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಲಿದೆ.
20ರಂದು ರೈಲು ನಂ.10108 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ಮೆಮು ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಸಾಯಂಕಾಲ 3.30 ಗಂಟೆಯ ಬದಲು 75 ನಿಮಿಷ ತಡವಾಗಿ 4.45ಕ್ಕೆ ಪ್ರಯಾಣ ಆರಂಭಿಸಲಿದೆ.
ರೈಲು ನಂ.12134 ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ಮಂಗಳೂರು ಜಂಕ್ಷನ್‌ನಿಂದ ಸಾಯಂಕಾಲ 4.35 ಬದಲು 60 ನಿಮಿಷ ತಡವಾಗಿ 5.35 ಗಂಟೆಗೆ ಪ್ರಯಾಣ ಆರಂಭಿಸಲಿದೆ.