ಕೊಂಕಣ ರೈಲ್ವೆ ಪೊಲೀಸರ ಕಾರ್ಯಾಚರಣೆ: ಆರೋಪಿ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಗೋವಾಕ್ಕೆ ಬರುತ್ತಿದ್ದಾನೆ ಎಂಬ ಸುಳಿವು ಲಭಿಸಿದೆ. ತಕ್ಷಣ ಕೊಂಕಣ ರೈಲ್ವೆ ಪೊಲೀಸ್ ಠಾಣೆಯ ಪಿಐ ವಿಕ್ರಂ ನಾಯಕ್ ನಿರ್ದೇಶನದಂತೆ ಜಿತೇಂದ್ರ ಗೌಡ ನೇತೃತ್ವದ ತಂಡ ರಚನೆ ಮಾಡಿದ್ದಾರೆ. ಕಾನ್‌ಸ್ಟೇಬಲ್‌ಗಳಾದ ವಸೀಂ ಶೇಖ್, ಮಂಜುನಾಥ ದೊಡ್ಡಮನಿ, ಸಂಜಯ್ ಗಾಂವ್ಕರ್ ತಂಡ ರೈಲ್ವೇ ನಿಲ್ದಾಣದಲ್ಲಿ ಬೀಡು ಬಿಟ್ಟರು. ಕೊಂಕಣ ರೈಲ್ವೆ ಎಸ್ಪಿ ಶೇಖರ್ ಪ್ರಭುದೇಸಾಯಿ, ಡಿವೈಎಸ್ಪಿ ಹಿರು ಕಾವ್ಲೇಕರ್ ಹಾಗೂ ಪಿಐ ವಿಕ್ರಂ ನಾಯಕ್ ಅವರ ಮಾರ್ಗದರ್ಶನ, ಸಿಸಿ ದೃಶ್ಯಾವಳಿ, ತಾಂತ್ರಿಕ ವಿಶ್ಲೇಷಣೆ ಹಾಗೂ ಗುಪ್ತಚರ ಮಾಹಿತಿ ಆಧಾರದ ಮೇಲೆ ಸಂಶಯಾಸ್ಪದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.