ತೊಕ್ಕೊಟ್ಟು ನಗರ ಪ್ರವೇಶ ನಿಷೇಧ

thokkottu new
Published on

ಉಳ್ಳಾಲ: ತೊಕ್ಕೊಟ್ಟಿನ ವ್ಯಕ್ತಿಯೊಬ್ಬರಲ್ಲಿ ಏ.3ರಂದು ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ತೊಕ್ಕೊಟ್ಟು ನಗರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ತೊಕ್ಕೊಟ್ಟು ಫ್ಲಾೃಟ್‌ನಲ್ಲಿ ವಾಸವಿದ್ದ ದೆಹಲಿಯಿಂದ ಆಗಮಿಸಿದ ವ್ಯಕ್ತಿಯಲ್ಲಿ ಪಾಸಿಟಿವ್ ಕಂಡು ಬಂದಿದ್ದು, ಫ್ಲಾೃಟ್‌ನಲ್ಲಿದ್ದ 80 ಕುಟುಂಬಗಳ ಸಹಿತ ತೊಕ್ಕೊಟ್ಟು ನಗರ ಪ್ರವೇಶವನ್ನು 14 ದಿನಗಳವರೆಗೆ ನಿರ್ಬಂಧಿಸಲಾಗಿದೆ. ಕೊಣಾಜೆ ಮಾರ್ಗವಾಗಿ ಮಂಗಳೂರಿಗೆ ಹೋಗುವವರು ತೊಕ್ಕೊಟ್ಟು ಬಸ್ ತಂಗುದಾಣದ ಒಳಹೋಗಿ ಅಲ್ಲಿಂದ ಸರ್ವೀಸ್ ರಸ್ತೆಯಲ್ಲಿ ಸಂಚರಿಸಬೇಕು. ಉಳ್ಳಾಲ, ತಲಪಾಡಿ ಭಾಗದಿಂದ ಅಥವಾ ಮಂಗಳೂರಿನಿಂದ ಬರುವವರು ತೊಕ್ಕೊಟ್ಟು ಜಂಕ್ಷನ್ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದ್ದು, ಇಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ತೊಕ್ಕೊಟ್ಟು ಮೇಲ್ಸೇತುವೆ ಮೂಲಕ ಹೋಗುವುದಕ್ಕೆ ಅಡ್ಡಿಯಿಲ್ಲ. ಏ.4ರಿಂದ ತೊಕ್ಕೊಟ್ಟು ಜಂಕ್ಷನ್ ಸಂಪೂರ್ಣ ಕ್ವಾರಂಟೈನ್‌ನಲ್ಲಿದೆ. ಇದರಿಂದ ಏ.14ಕ್ಕೆ ಲಾಕ್‌ಡೌನ್ ಮುಗಿದರೂ ತೊಕ್ಕೊಟ್ಟುಗೆ ಮುಕ್ತಿ ಸಿಗಬೇಕಾದರೆ ಏ.18ರವರೆಗೆ ಕಾಯಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net