ತೊಕ್ಕೊಟ್ಟಿನ ಅಟೋಮೊಬೈಲ್‌ ಅಂಗಡಿಯಲ್ಲಿ ಬೆಂಕಿ ಅವಘಡ

IMG-20210531-WA0018
Published on

ಮಂಗಳೂರು: ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ ಪಕ್ಕದ ಕೊರಗಜ್ಜನ ಕಟ್ಟೆ ಬಳಿಯ ಅಟೋಮೊಬೈಲ್‌ ಅಂಗಡಿಯಲ್ಲಿ ಭಾರಿ ಬೆಂಕಿ ಅವಘಡ ಉಂಟಾಗಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಕುಂಪಲ ನಿವಾಸಿ ಭರತ್‌ ಎನ್ನುವವರಿಗೆ ಸೇರಿದ ಗೋಲ್ಡನ್‌ ಅಟೋ ಸ್ಪೇರ್‌ ಪಾರ್ಟ್ಸ್‌ ಹೆಸರಿನ ಮಳಿಗೆಯಾಗಿದೆ. ಮುಚ್ಚಿದ್ದ ಅಂಗಡಿಯಲ್ಲಿ ದಟ್ಟವಾದ ಹೊಗೆ ಆವರಿಸಿರುವುದರನ್ನು ಕಂಡು
ಸ್ಥಳೀಯರು ಶಟರ್‌ ಒಡೆದು, ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಆದರೆ ನಂದಿಸಲು ಸಾಧ್ಯವಾಗಿಲ್ಲ, ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net