ಸಿಕಲ್‌ಸೆಲ್ ತಪಾಸಣಾ ಕೇಂದ್ರಕ್ಕೆ ಟಿಎಚ್‌ಒ ಭೇಟಿ

14 SARAG 1
ಸರಗೂರು ತಾಲೂಕಿನ ಕೆ.ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಕ್ಕೂರು ಗ್ರಾಮದಲ್ಲಿ ಸಿಕಲ್‌ಸೆಲ್ ತಪಾಸಣೆ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
Published on

ಸರಗೂರು: ತಾಲೂಕಿನ ಕೆ.ಬೆಳತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಚಕ್ಕೂರು ಗ್ರಾಮದಲ್ಲಿ ಸಿಕಲ್‌ಸೆಲ್ ತಪಾಸಣೆ ವೇಳೆ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಗ್ರಾಮದ ಮನೆ ಮನೆಗೆ ರವಿಕುಮಾರ್ ಅವರು ಹೋಗಿ ಜನರಿಗೆ ಸಿಕಲ್‌ಸೆಲ್ ಅನಿಮಿಯಾ ಬಗ್ಗೆ ಜನರಿಗೆ ಆರೋಗ್ಯ ಶಿಕ್ಷಣ ನೀಡಿದರು. 0-40 ವರ್ಷದವರೆಗೆ ಸಿಕಲ್‌ಸೆಲ್ ಅನಿಮಿಯಾ ತಪಾಸಣೆ ಮಾಡುತ್ತೇವೆ. ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ನಂತರ ಕೆ.ಬೆಳತ್ತೂರು ಗ್ರಾಮದಲ್ಲಿ ನಡೆಯುತ್ತಿದ್ದ ಗ್ರಾಮ ಸಭೆಗೆ ಹಾಜರಾಗಿ ಚಕ್ಕೂರು ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ ಮಾಡಲು ಸ್ಥಳ ನೀಡಲು ಮನವಿ ಮಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯೋಗೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಅಂಕಯ್ಯ, ಉಪಾಧ್ಯಕ್ಷೆ ಪ್ರೀತಿ ನಂಜಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಮುಖಂಡರು, ಆರೋಗ್ಯ ಇಲಾಖೆ ಸಿಬ್ಬಂದಿ ರವಿರಾಜ್, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net