ಕಾರವಾರ: ಇಲ್ಲಿನ ಕೋಡಿಬಾಗ ಸಾಯಿ ಮಂದಿರದಲ್ಲಿ ಕಳ್ಳತನ ನಡೆಸಿದ್ದ ಮೂವರನ್ನು ಕಾರವಾರ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ತ್ರಿಲೋಕ ಸಿಂಗ್, ಉತ್ತರಾಖಂಡ್ ನ ರೇಸಮ್ ಸಿಂಗ್ ಹಾಗೂ ಕುಲವಂತ ಸಿಂಗ್ ಬಂಧಿತರು.
ಎಪ್ರಿಲ್ 14 ರಂದು ಕಳ್ಳತನ ನಡೆದಿತ್ತು. ಕಳ್ಳತನದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಕಳ್ಳರು ಸಾಯಿಬಾಬಾ ಮೂರ್ತಿಯ ಸುತ್ತ ಇದ್ದ ಬೆಳ್ಳಿಯ ಕೆಜಿಗಟ್ಟಲೇ ಆಭರಣಗಳನ್ನು ದೋಚಿದ್ದರು. ಇಲ್ಲಿಂದ ಗೋವಾಕ್ಕೆ ಪರಾರಿಯಾಗಿದ್ದರು.
ಸೋಮವಾರ ಅವರನ್ನು ಬಂಧಿಸಿರುವ ಪೊಲೀಸರು ಮಂಗಳವಾರ ಅವರನ್ನು ಗೋವಾಕ್ಕೆ ಕರೆದೊಯ್ದು ಮಾರಾಟ ಮಾಡಿದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.