

ಕಾರವಾರ: ಗುಡ್ಡ ಕುಸಿತವಾದ ಕಾರಣ ಬೈತಖೋಲ್ - ಬಿಣಗಾ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
ಬಿಣಗಾ-ಕಾರವಾರ ನಡುವಿನ ಸುರಂಗ ದ್ವಾರದಲ್ಲಿ ಕಲ್ಲು ಉದುರಿ ಬಿದ್ದಿದ್ದರಿಂದ ಭಾನಯವಾರ ಕೆಲಕಾಲ ಒಂದು ಸುರಂಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು, ಬೈತಖೋಲಾ ಮಾರ್ಗವಾಗಿ ವಾಹನಗಳನ್ನು ಬಿಡಲಾಗುತ್ತಿತ್ತು. ಆದರೆ, ಬೈತಖೋಲ್ ಮಾರ್ಗದಲ್ಲೂ ಗುಡ್ಡ ಕುಸಿದಿದ್ದರಿಂದ ಆ ಮಾರ್ಗ ಬಂದ್ ಮಾಡಿ, ಅನಿವಾರ್ಯವಾಗಿ ಸುರಂಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ನೀರು ತುಂಬಿದೆ.
ಗುಡ್ಡದ ಮೇಲೆ ನೀರು ತುಂಬಿದ್ದರಿಂದ ಸುರಂಗದ ಪಕ್ಕ ಗುಡ್ಡ ಕುಸಿದಿದೆ ಎಂದು ಕೊಂಕಣ ರೈಲ್ವೆ ತಜ್ಞರು ಸ್ಥಳ ಭೇಟಿ ಮಾಡಿ ವರದಿ ನೀಡಿದ್ದಾರೆ. ನೀರು ಹರಿವಿಗೆ ದಾರಿ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.