VIDEO| ಆತ್ಮಸ್ಥೈರ್ಯವಿದ್ದರೆ ಕೋವಿಡ್ ಗೆಲ್ಲಬಹುದು ಎನ್ನುವುದಕ್ಕೆ ಈ ವೃದ್ಧನೇ ಸಾಕ್ಷಿ!

Yoga
Published on

ಬೆಂಗಳೂರು: ಆತ್ಮಸ್ಥೈರ್ಯವಿದ್ದರೆ ಕೋವಿಡನ್ನೂ ಗೆಲ್ಲಬಹುದು ಎನ್ನುವುದಕ್ಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ 65 ವರ್ಷದ ಈ ವೃದ್ಧನೇ ಸಾಕ್ಷಿ.

ಇವರು ತಾವು ಮಾತ್ರವಲ್ಲದೆ ವಾರ್ಡ್‌ನ ಇತರೆ ಸೋಂಕಿತರಿಗೂ ಕೋವಿಡ್ ವಿರುದ್ಧ ಹೋರಾಡಲು ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ಈ ವೃದ್ಧ, ಆಕ್ಸಿಜನ್ ಅವಲಂಭಿಸಿದ್ದರು. ಎರಡು ದಿನಗಳ ಚಿಕಿತ್ಸೆಯಲ್ಲೇ ಕೊಂಚ ಸುಧಾರಿಸಿಕೊಂಡ ಇವರು, ಮರು ದಿನವೇ ವಾರ್ಡ್‌ನಲ್ಲೇ ಯೋಗಾಸನ ಮಾಡಲು ಪ್ರಾರಂಭಿಸಿದರು. ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರೆ ಸೋಂಕಿತರಿಗೂ ಯೋಗಾ ಕಲಿಸುತ್ತಿದ್ದಾರೆ.

ಇವರು ಮಾಡುವ ಯೋಗಾಸನಗಳನ್ನು ನೋಡಿ ವಾರ್ಡ್‌ನ ಇತರೆ ಸೋಂಕಿತರು ತಾವೂ ಸಹ ಹಾಸಿಗೆಯ ಮೇಲೆಯೇ ಯೋಗಾ ಮಾಡಲು ಪ್ರಾರಂಭಿಸಿದ್ದಾರಂತೆ. ಹೀಗೆ ಈ ವೃದ್ಧ ಆತಂಕಗೊಂಡಿರುವ ಸೋಂಕಿತರಲ್ಲಿ ಕೋವಿಡ್ ವಿರುದ್ಧ ಹೋರಾಡಲು ಆತ್ಮಬಲ ಹೆಚ್ಚಿಸುತ್ತಿದ್ದಾರೆ ಎನ್ನುತ್ತಾರೆ ಕೋವಿಡ್ ವಾರ್ಡ್‌ನ ವೈದ್ಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net