ಇದು ಕೇಸರಿಕರಣ ಪಕ್ಷದ ವಿದಾಯ ಬಜೆಟ್

M-Lakshmana
Published on

ಮೈಸೂರು: ವಿತ್ತೆ ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ ಆಯವ್ಯಯ ರಾಜಕೀಯ ಭಾಷಣವಾಗಿದೆ. ಇದು ಕೇಸರಿಕರಣ ಪಕ್ಷದ ವಿದಾಯ ಬಜೆಟ್ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು.

ಈ ಆಯವ್ಯಯವೂ ಭವಿಷ್ಯದ ಬಗ್ಗೆ ಸ್ಪಷ್ಟತೆ ಇಲ್ಲದ ಆಡಳಿತಾತಕ ಪಠ್ಯ. ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಓದಿದ ಕೀರ್ತಿ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿರುವುದಾಗಿ ಪ್ರಕಟಿಸಲಾಗಿದೆ. ಚಪ್ಪಲಿ ಹಾಕಿದ, ಮೊಬೈಲ್ ಇರುವ, ದ್ವಿಚಕ್ರ ವಾಹನ ಇರುವ ಕುಟುಂಬಗಳು ಬಡವರಲ್ಲ. ಇದು ಹಾಸ್ಯಾಸ್ಪದವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net