

ಧಾರವಾಡ: ಧಾರವಾಡ ಕೃಷಿ ಮೇಳಕ್ಕೆ ಈ ಬಾರಿ ಭೇಟಿ ನೀಡುವ ರೈತರ ಡಿಜಿಟಲ್ ನೋಂದಣಿಗೆ ಬಾರ್‌ಕೋಡ್, ಫೇಸ್ ರೀಡಿಂಗ್ ಕ್ಯಾಮರಾ ಅಳವಡಿಸಲಾಗುತ್ತಿದೆ. ಕೃಷಿ ಮೇಳದಲ್ಲಿ ಎಲ್ಲೆಲ್ಲಿ ಏನಿದೆ? ಎಂಬ ಮಾಹಿತಿಯೊಂದಿಗೆ ಡಿಜಿಟಲ್ ಮ್ಯಾಪ್ ಕೂಡ ರೈತರಿಗೆ ಲಭ್ಯವಾಗಲಿದೆ.
ಪ್ರಥಮ ಬಾರಿಗೆ ನೋಂದಣಿ ಪ್ರಕ್ರಿಯೆ ಡಿಜಿಟಲೀಕರಣಗೊಳಿಸಿರುವ ಕೃಷಿ ವಿಶ್ವವಿದ್ಯಾಲಯ ಈಗಾಗಲೇ ಬಾರ್‌ಕೋಡ್ ಬಿಡುಗಡೆ ಮಾಡಿದೆ. ಒಂದು ದಿನದ ಮುಂಚೆ ಫೇಸ್ ರೀಡಿಂಗ್ ಕ್ಯಾಮರಾ ಅಳವಡಿಸಲು ಸಿದ್ಧತೆ ಕೈಗೊಂಡಿದೆ. ಬಾರ್ ಕೋಡ್‌ನಲ್ಲಿ ರೈತರ ವಿಳಾಸ ಸಹಿತ ವಿವರ ದಾಖಲಾದರೆ, ಕೃಷಿ ಮೇಳಕ್ಕೆ ಎಷ್ಟು ಜನರು ಭೇಟಿ ನೀಡಿದ್ದಾರೆ ಎಂಬ ಅಂಕಿ-ಸಂಖ್ಯೆ ನಿಖರವಾಗಿ ಸಂಗ್ರಹಿಸುವುದಕ್ಕೆ ಫೇಸ್ ರೀಡಿಂಗ್ ಸಿಸಿ ಕ್ಯಾಮರಾ ಬಳಸಿಕೊಳ್ಳಲಾಗುತ್ತಿದೆ.
ಮೇಳಕ್ಕೆ ಆಗಮಿಸುವ ರೈತರು ಕೃಷಿ ವಿವಿ ಮುಖ್ಯ ದ್ವಾರ, ಸುತ್ತಲಿನ ಪ್ರದೇಶದಲ್ಲಿ ಅಳವಡಿಸಿರುವ ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹೆಸರು, ಊರು, ಜಿಲ್ಲೆ. ಮೊಬೈಲ್ ಸಂಖ್ಯೆ ದಾಖಲಿಸಬೇಕು. ಈ ಪ್ರಕ್ರಿಯೆ ಮುಗಿದ ಬಳಿಕ ವಾಟ್ಸ್ಆ್ಯಪ್‌ಗೆ ಲಿಂಕ್ ಬರುತ್ತದೆ. ಆ ಲಿಂಕ್ ಕ್ಲಿಕ್ ಮಾಡಿದರೆ, ಕೃಷಿ ಮೇಳದಲ್ಲಿ ಯಾವ ದಿನ ಎಲ್ಲಿ ಏನೇನು ಕಾರ್ಯಕ್ರಮಗಳಿವೆ? ಎನ್ನುವ ಮಾಹಿತಿ ಲಭ್ಯವಾಗುತ್ತದೆ. ಲಿಂಕ್‌ನಲ್ಲಿರುವ ಕಾರ್ಯಕ್ರಮಗಳ ಮಾಹಿತಿ ಪಟ್ಟಿ ಮೇಲೆ ಕ್ಲಿಕ್ ಮಾಡಿದರೆ, ಕಾರ್ಯಕ್ರಮದ ನಡೆಯುವ ಸ್ಥಳದ ಡಿಜಿಟಲ್ ಮ್ಯಾಪ್ (ಗೂಗಲ ಮ್ಯಾಪ್ ರೀತಿ) ಓಪನ್ ಆಗುತ್ತದೆ. ಅದರ ಮೂಲಕ ಸುಲಭವಾಗಿ ಆ ಸ್ಥಳಗಳಿಗೆ ಹೋಗಬಹುದು. ಪ್ರಮಾಣ ಪತ್ರ: ಈ ಹಿಂದೆ ಕೃಷಿ ಮೇಳಕ್ಕೆಭೇಟಿ ನೀಡಿದ್ದಕ್ಕೆ ಕೆಲವು ಇಲಾಖೆ ಅಧಿಕಾರಿಗಳು, ಕೃಷಿಕ ಸಮಾಜಗಳು, ಸಂಘ-ಸಂಸ್ಥೆಗಳು ದಾಖಲೆಗಳಿಗಾಗಿ ಪ್ರಮಾಣಪತ್ರಗಳು ಕೇಳುತ್ತಿದ್ದರು. ಪ್ರಮಾಣ ಪತ್ರ ವಿತರಿಸುವುದಕ್ಕೆ వివి ಪುರುಸೊತ್ತು * ಸಿಬ್ಬಂದಿಗೆ ಸಿಗುತ್ತಿರಲಿಲ್ಲ. ಆ ಸಮಸ್ಯೆ ಕೃಷಿ ವಿವಿ ನಿವಾರಿಸಿದ್ದು, ಬಾರ್‌ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಂಡು ಕೃಷಿ ಮೇಳದ ಕಾರ್ಯಕ್ರಮಗಳಿಗೆ ಹಾಜರಾದವರಿಗೆ ಲಿಂಕ್ ಮೂಲಕ ಡಿಜಿಟಲ್ ಡೌನ್‌ಲೋಡ್ ಆಯ್ಕೆ ಇಡಲಾಗಿದೆ. ಪ್ರಮಾಣಪತ್ರ ಮಾಡಿಕೊಳ್ಳುವ
26 ಸಾವಿರ ಜನರ ನೋಂದಣಿ: ಕೃಷಿ ಮೇಳ ಪ್ರಚುರ ಪಡಿಸುವುದಕ್ಕೆ ರಾಜ್ಯದ ಎಲ್ಲ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ, ವಿವಿಧ ಸಂಘ-ಸಂಸ್ಥೆ, ಕೃಷಿ ಮಹಾವಿದ್ಯಾಲಯಗಳು ಹಾಗೂ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳ ಕಚೇರಿಗಳಲ್ಲಿ ಬಾರ್ ಕೋಡ್ ಒಳಗೊಂಡ ಬಿತ್ತಿ ಪತ್ರಗಳನ್ನೂ ಕೃಷಿ ವಿವಿ ಸಿಬ್ಬಂದಿ ರವಾನಿಸಿದ್ದಾರೆ. ಈಗಾಗಲೇ 26 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಈ ಮೊದಲು ಕೃಷಿ ಮೇಳಕ್ಕೆ ಭೇಟಿ ನೀಡುವವರ ನೋಂದಣಿ ಕಾರ್ಯ ಮ್ಯಾನುವಲ್ ಆಗಿ ಮಾಡಲಾಗುತ್ತಿತ್ತು. ಮೇಳಕ್ಕೆ ಭೇಟಿ ನೀಡಿದ ಬಹಳಷ್ಟು ಜನರು ನೋಂದಣಿಯನ್ನೇ ಮಾಡಿಸುತ್ತಿರಲಿಲ್ಲ. ಹೀಗಾಗಿ ಕೃಷಿ ವಿವಿಗೆ ನಿಖರವಾದ ಮಾಹಿತಿ ಸಿಗುತ್ತಿರಲಿಲ್ಲ. ಜತೆಗೆ ಕೃಷಿ ಮೇಳದ ಮಾಹಿತಿ ಪತ್ರಗಳೂ ರೈತರಿಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಈ ಸಮಸ್ಯೆ ಅರಿತು ಕೃಷಿ ವಿವಿ ಡಿಜಿಟಲ್ ನೋಂದಣಿಗೆ ಮುಂದಾಗಿದೆ.
5 ಸ್ಥಳದಲ್ಲಿ ಕ್ಯಾಮರಾ ಅಳವಡಿಕೆ:
ಮೇಳಕ್ಕೆ ಬರುವವರ ಸಂಖ್ಯೆ ಕಲೆ ಹಾಕಲು ವಿಶ್ವವಿದ್ಯಾಲಯದ ಆವರಣದ ಐದು ಕಡೆಗಳಲ್ಲಿ ಫೇಸ್ ರೀಡಿಂಗ್ ಕ್ಯಾಮರಾಗಳನ್ನು ಕೃಷಿ ಮೇಳ ಆರಂಭದ ಒಂದು ದಿನ ಮೊದಲು ಅಳವಡಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಫೇಸ್ ರೀಡಿಂಗ್ ಕ್ಯಾಮರಾಗಳು ಒಂದು ಗೇಟ್‌ನಲ್ಲಿ ಸುಮಾರು 50ರಿಂದ 100 ಜನರು ಬಂದರೆ ಅವರೆಲ್ಲರ ಫೇಸ್ ರೀಡ್ ಮಾಡಿ, ಮತ್ತೆ ಸನ್ನದ್ದವಾಗುತ್ತದೆ. ಗೇಟ್ ಮೂಲಕ ಪ್ರವೇಶ ಪಡೆಯುವ ಎಲ್ಲರ ಮುಖ ಸ್ಕ್ಯಾನ್ ಮಾಡಿ, ಮೇಳಕ್ಕೆ ಎಷ್ಟು ಜನರು ಭೇಟಿ ನೀಡಿದರು? ಎಂದು ನಿಖರ ಅಂಕಿ-ಸಂಖ್ಯೆಗಳನ್ನು ದಾಖಲಿಸಿಕೊಳ್ಳುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.