ಇದು ಅಕ್ಕ-ತಮ್ಮನ ನಡುವಿನ ಸ್ಪರ್ಧೆ

Hbhalli kotresh
ವಕೀಲ ಕೊಟ್ರೇಶ್ ಶೆಟ್ಟರ್
Published on

ಹಗರಿಬೊಮ್ಮನಹಳ್ಳಿ: ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಜು.21ರಂದು ಪಟ್ಟಣದ ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ನಾನು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ವಕೀಲ ಕೊಟ್ರೇಶ್ ಶೆಟ್ಟರ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಮಹಾಸಭಾ ತಾಲೂಕು ಘಟಕ 10 ವರ್ಷಗಳಿಂದ ಯಾವುದೇ ಚಟುವಟಿಕೆ ಇಲ್ಲದೆ ನಿಷ್ಕ್ರಿಯವಾಗಿದೆ. ಈವರೆಗೆ ಇದ್ದ ಅಧ್ಯಕ್ಷರು ಕೇವಲ ಹೆಸರಿಗಷ್ಟೇ ಇದ್ದರು. ಅವಿರೋಧವಾಗಿ ಆಯ್ಕೆಯಾಗಬೇಕಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕಣದಲ್ಲಿ ರೇಣುಕಾ ವಿದ್ಯಾಸಂಸ್ಥೆಯ ಇಂದುಮತಿ ತಿಪ್ಪೇಸ್ವಾಮಿ ಅವರು ಎದುರಾಳಿಯಾಗಿದ್ದಾರೆ.

ಇದು ಜಂಗಮ ಮತ್ತು ಪಂಚಮಸಾಲಿ ಹೋರಾಟ ಎಂದು ಕೆಲವರು ಬಣ್ಣಿಸುತ್ತಿರುವುದು ತಪ್ಪು. ಇದು ಅಕ್ಕ-ತಮ್ಮನ ನಡುವಿನ ಸ್ಪರ್ಧೆ ಎಂದ ಅವರು, 10 ಸಾವಿರ ಸದಸ್ಯತ್ವ ನೋಂದಣಿ ಗುರಿ, ಮಹಾಸಭಾದ ಕಚೇರಿ ಆರಂಭ, ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಸೇರಿ ಸಮಾಜದ ಏಳ್ಗೆಗೆ ಶ್ರಮಿಸುವ ಉದ್ದೇಶದೊಂದಿಗೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net