'ಕಲೆಕ್ಷನ್​ ಗಿರಾಕಿ' ಕಾಮೆಂಟಿಗೆ 'ಡಿಕೆಶಿಗೆ ಇಂಥ ಪ್ರಕರಣಗಳು ಹೊಸದೇನೂ ಅಲ್ಲ' ಎಂದ ಸಚಿವೆ ಶೋಭಾ ಕರಂದ್ಲಾಜೆ

shobha
Published on

ಮೈಸೂರು: ಕಾಂಗ್ರೆಸ್‌ ವಕ್ತಾರ ವಿ.ಎಸ್.ಉಗ್ರಪ್ಪರೊಂದಿಗಿನ ಸಂಭಾಷಣೆಯಲ್ಲಿ ಸಲೀಂ ಎಂಬ ಕಾರ್ಯಕರ್ತರು ಡಿ.ಕೆ.ಶಿವಕುಮಾರ್​ ಅವರನ್ನು 'ಕಲೆಕ್ಷನ್ ಗಿರಾಕಿ' ಎಂದು ಕರೆದಿರುವುದು ಪ್ರಸಾರವಾಗಿದೆ. ಈ ಬಗ್ಗೆ ಹಲವು ನಾಯಕರು ಬೇರೆ ಬೇರೆ ರೀತಿ ಪ್ರತಿಕ್ರಿಯಿಸಿದ್ದು, ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ತಮ್ಮ ಅನಿಸಿಕೆ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರಂದ್ಲಾಜೆ, ಇಂತಹ ಹೊಲಸು ರಾಜಕೀಯದ ಬಗ್ಗೆ ಮಾತನಾಡುವ ಆಸಕ್ತಿ ಇಲ್ಲ ಎಂದರು. ಆದರೆ ಮುಂದುವರಿದು, "ಡಿಕೆಶಿಗೆ ಇಂತಹ ಪ್ರಕರಣಗಳು ಹೊಸದೇನೂ ಅಲ್ಲ. ಕಾಂಗ್ರೆಸ್‌ ಅಂದ್ರೆ ಅದು ಹಗರಣಗಳ ಸರ್ಕಾರ. ಅವರ ಅಧಿಕಾರದಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಅದು ರಾಜ್ಯದಲ್ಲೂ ಅಷ್ಟೆ, ಕೇಂದ್ರದ ಯುಪಿಎ ಸರ್ಕಾರವಾದರೂ ಅಷ್ಟೆ. ಅದರಲ್ಲಿ ಡಿಕೆಶಿ ನಡೆಸಿದ ಹಗರಣವನ್ನು ಅವರ ಪಕ್ಷದ ಮುಖಂಡರೇ ಬಯಲು ಮಾಡಿದ್ದಾರೆ" ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net