ಬೈಕುಗಳನ್ನು ಕದಿಯೋದೇ ಈ ಡ್ರೈವರ್ ನ ಕೆಲಸ, ಗಾಡಿಗಳ ಸಮೇತ ಕಳ್ಳನನ್ನು ಬಂಧಿಸಿದ ಪೊಲೀಸರು

13cbpcrime4a.jpg
Published on

ಚಿಕ್ಕಬಳ್ಳಾಪುರ: ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, 18 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಪಿ.ಕೆ.ಭಾಸ್ಕರ್ (48 ವರ್ಷ). ಇತ್ತೀಚೆಗೆ ನಗರಸಭೆಯ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆಗೆ ಅಪರ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ ರಾಯ್, ಡಿವೈಎಸ್ಪಿ ಶಿವಕುಮಾರ್ ಮಾರ್ಗದರ್ಶನಲ್ಲಿ ವೃತ್ತ ನಿರೀಕ್ಷಕ  ಎಂ.ಮಂಜುನಾಥ್, ಪಿಎಸ್ ಐಗಳಾದ ಅಮರ್, ರತ್ನಾ ಭಾಯಿ, ಸಿಬ್ಬಂದಿ ಲೋಕೇಶ್, ಪಕ್ಕೀರಜ್ಜು ಗೊಂದಿ, ಮಧುಸೂದನ್, ಲಕ್ಷ್ಮಣ್, ಆಯುಬ್ ಮುಲ್ಲಾ, ನರೇಂದ್ರ ಕುಮಾರ್, ರವೀಂದ್ರ, ಮುನಿಕೃಷ್ಣರನ್ನೊಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಂಡವನ್ನು ರಚಿಸಿದ್ದರು.‌ ಇದು ಆರೋಪಿಯನ್ನು ಬಂಧಿಸಿದೆ. ಈತನ ವಿರುದ್ಧ ತುಮಕೂರು ನಗರ ಪೊಲೀಸ್ ಠಾಣೆ, ಹೊಸ ಬಡಾವಣೆ ಪೊಲೀಸ್ ಠಾಣೆ, ದೇವನಹಳ್ಳಿ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ವಿವಿಧ ಕಂಪನಿಗಳ 18 ದ್ವಿಚಕ್ರ ವಾಹನಗಳನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net