ಇಂದಿನ ಯುವಕರಿಗೆ ಮಾದರಿ ಈ ವೈದ್ಯರು

This doctor is a role model for today's youth
ರಬಕವಿ ತ್ರೀಷಲಾದೇವಿ ಆಸ್ಪತ್ರೆಯಲ್ಲಿ ಡಾ. ಪದ್ಮಜೀತ್ ನಾಡಗೌಡ ಪಾಟೀಲ, ಡಾ. ಯತೀಶ ಪೂಜಾರಿ ಹಾಗೂ ಸಂಜಯ ಅಮ್ಮಣಗಿಮಠ ಅವರನ್ನು ಜಂಗಮ ಸಮಾಜದಿಂದ ಸನ್ಮಾನಿಸಲಾಯಿತು. ಜಿ. ಎಸ್. ಅಮ್ಮಣಗಿಮಠ, ದಯಾನಂದ ಬಾಗಲಕೋಟಮಠ, ಶಂಬುಲಿಂಗ ಹಿರೇಮಠ, ಶಿವಾನಂದ ಮಠದ, ಶಿವಕುಮಾರ ಹಿರೇಮಠ ಇತರರಿದ್ದರು.
Published on

ರಬಕವಿ/ಬನಹಟ್ಟಿ: ಪುಣ್ಯಕ್ಷೇತ್ರಗಳ ದರ್ಶನ ಪಡೆಯಲು 2000 ಸಾವಿರ ಕಿ.ಮೀ ಸೈಕಲ್ ಸವಾರಿ ಮಾಡಿ ಇಂದಿನ ಯುವಪೀಳಿಗೆಗೆ ರಬಕವಿ ನಗರದ ಈ ವೈದ್ಯರು ಮಾದರಿಯಾಗಿದ್ದಾರೆ ಎಂದು ರಬಕವಿ ಜಂಗಮ ಸಮಾಜದ ಅಧ್ಯಕ್ಷ ಜಿ. ಎಸ್. ಅಮ್ಮಣಗಿಮಠ ಹೇಳಿದರು.

ಸೋಮವಾರ ಸಂಜೆ ರಬಕವಿ ತ್ರೀಷಲಾದೇವಿ ಆಸ್ಪತ್ರೆಯಲ್ಲಿ ಡಾ. ಪದ್ಮಜೀತ್ ನಾಡಗೌಡ ಪಾಟೀಲ, ಡಾ. ಯತೀಶ ಪೂಜಾರಿ ಹಾಗೂ ಸಂಜಯ ಅಮ್ಮಣಗಿಮಠ ಅವರನ್ನು ಸನ್ಮಾನಿಸಿ ಮಾತನಾಡಿದರು. ಹಿರಿಯ ಶಿವಾನಂದ ಬಾಗಲಕೋಟಮಠ ಮಾತನಾಡಿದರು.

ಇಬ್ಬರು ವೈದ್ಯರು ಸನ್ಮಾನ ಸ್ವೀಕರಿಸಿ ಸುದೀರ್ಘ 10 ದಿನಗಳ ಸೈಕಲ್ ಸವಾರಿ ಕುರಿತು ತಮ್ಮ ಅನುಭವ ಹಂಚಿಕೊಂಡರು.

ದಯಾನಂದ ಬಾಗಲಕೋಟಮಠ, ಶಂಬುಲಿಂಗ ಹಿರೇಮಠ, ಶಿವಾನಂದ ಮಠದ, ಶಿವಕುಮಾರ ಹಿರೇಮಠ, ಎಂ. ಎಸ್. ಹುಲಗೇರಿಮಠ, ಶಿವಾನಂದ ಚಿಕಮಠ, ಭೀಮು ಮಠಪತಿ, ನಿಂಗಯ್ಯ ಕರಡಿ, ಮಹಾದೇವ ಮಠಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net