ತೀರ್ಥಹಳ್ಳಿಗೆ ಇಡಿ ತಂಡ, ಕಿಮ್ಮನೆ ರತ್ನಾಕರ್ ವಿಚಾರಣೆ

Untitled
Published on

ಶಿವಮೊಗ್ಗ: ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ತಂಡ ತೀರ್ಥಹಳ್ಳಿಗೆ ಬುಧವಾರ ಭೇಟಿ ನೀಡಿದ್ದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಕಾಂಗ್ರೆಸ್ ಕಚೇರಿ ಸೇರಿ ಹಲವೆಡೆ ಪರಿಶೀಲನೆ ನಡೆಸಿತು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಕಚೇರಿ ಮತ್ತು ಪಟ್ಟಣದ ಸೊಪ್ಪುಗುಡ್ಡೆಯ ಶಾರಿಖ್‌ ಅಜ್ಜಿಯ ಮನೆಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು.

ಶಾರಿಖ್‌ನ ಅಜ್ಜನಿಗೆ ಸೇರಿದ ಕಟ್ಟಡದಲ್ಲಿ ಕಿಮ್ಮನೆ ರತ್ನಾಕರ್ ಅವರು ಪಕ್ಷದ ಕಚೇರಿಯನ್ನು ತೆರೆದಿದ್ದರು. ಈ ಸಂಬಂಧ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಈ ಅಗ್ರಿಮೆಂಟ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಸಂಬಂಧಿ ಹೆಸರಲ್ಲಿ ಮಾಡಿಕೊಳ್ಳಲಾಗಿತ್ತು.

ಸದ್ಯ ಶಾರಿಖ್‌ಗೆ ಸೇರಿದ ಹಣ ಮೂಲ ಮತ್ತು ಆಸ್ತಿ ಮೂಲದ ವಿಚಾರವಾಗಿ ಭೇಟಿ ನೀಡಿದ್ದು ದಾಖಲಾತಿ ಪರಿಶೀಲನೆ ನಡೆಸಿದರು. ಇದೇ ವಿಚಾರವಾಗಿ ಶಾರಿಖ್‌ನ ಅಜ್ಜಿಯನ್ನು ಸಹ ವಿಚಾರಣೆ ನಡೆಸಿರುವ ಅಧಿಕಾರಿಗಳು ಈ ಸಂಬಂಧ ದಾಖಲೆ ಪರಿಶೀಲಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ಅಧಿಕಾರಿಗಳ ಪ್ರಶ್ನೆಗೆ ಕಿಮ್ಮನೆ ರತ್ನಾಕರ್ ಅವರು ಸಮರ್ಪಕ ಉತ್ತರ ನೀಡಿದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net