

ನಾಗರಾಜ ಜೋರಾಪೂರ ಚನ್ನಮ್ಮನ ಕಿತ್ತೂರು
ಪ್ರತಿಯೊಬ್ಬರಿಗೂ ಶುದ್ಧ ಕುಡಿವ ನೀರು ಒದಗಿಸಬೇಕು ಎಂಬ ಉದ್ದೇಶದಿಂದ ಕಿತ್ತೂರು ಪಟ್ಟಣದಲ್ಲಿ ಏಂಟು ಶುದ್ಧ ಕುಡಿವ ನೀರಿನ ಟಕಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳಲ್ಲಿ ಐದು ಟಕಗಳು ಆರಂಭವಾಗದೇ ತುಕ್ಕು ಹಿಡಿದು ಹಾಳಾಗಿ ಹೋಗುತ್ತಿವೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಎಂಟು ಟಕಗಳಲ್ಲಿ ಮೂರು ಟಕಗಳು ಸುಸ್ಥಿತಿಯಲ್ಲಿವೆ. ಗುರುವಾರ ಪೇಟೆ ರೆತರ ಓಣಿ, ಚನ್ನಮ್ಮ ಕೋಟೆ ಆವರಣ, ಸೋಮವಾರ ಪೇಟೆಯ ನೇಕಾರ ಓಣಿ, ಹರಿಜನ ಕೇರಿ, ಗಣಪತಿ ಗಲ್ಲಿಯಲ್ಲಿ ಇರುವ ಶುದ್ಧ ಕುಡಿವ ನೀರಿನ ಟಕಗಳು ವಿದ್ಯುತ್, ನೀರಿನ ಸಂಪರ್ಕ ಇಲ್ಲದೇ ಒಂದು ಹನಿ ನೀರನ್ನು ಕೊಡದೇ ತುಕ್ಕು ಹಿಡಿದು ಹಾಳಾಗಿ ಹೋಗುತ್ತಿವೆ. ಇವುಗಳ ಆರಂಭಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ.
ಹೀಗಾಗಿ ಸರ್ಕಾರ ಹಣ ಅಧಿಕಾರಿಗಳ ಬೇಜವಾಬ್ದಾರಿಯಿಂದ ವ್ಯಥ್ಯವಾಗಿ ಹೋಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಹಾಳಾಗಿ ಹೋಗುತ್ತಿರುವ ನೀರಿನ ಟಕಗಳ ಆರಂಭಕ್ಕೆ ಕ್ರಮವಹಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಪಟ್ಟಣದಲ್ಲಿ ಶುದ್ಧ ನೀರಿನ ಟಕಗಳು ಇದ್ದರೂ ಪ್ರಯೋಜನವಿಲ್ಲ. ಪಟ್ಟಣದ ಐದು ನೀರಿನ ಟಕ ನಿರ್ಮಾಣಗೊಂಡಾಗಿನಿಂದಲೂ ಪ್ರಾರಂಭವೇ ಆಗಿಲ್ಲ. ಇದರಿಂದ ಜನರ ದುಡ್ಡು ಹಾಳಾಗಿ ಹೋಗುತ್ತಿದೆ. ಇನ್ನಾದರೂ ಅವುಗಳು ಆರಂಭಗೊಳ್ಳಲಿ.
> ರಾಹುಲ ಸೊಂಟಕ್ಕಿ, ಪಟ್ಟಣದ ನಿವಾಸಿ
ಸಣ್ಣಪುಟ್ಟ ಸಮಸ್ಯೆಗಳಿಂದ ಕೆಲವು ಶುದ್ಧ ನೀರಿನ ಟಕಗಳು ಸ್ಥಾಪಿಸಿದಾಗನಿಂದ ಪ್ರಾರಂಭವಿಲ್ಲ. ಅವುಗಳಿಗೆ ಬೇಕಾಗುವ ಸೌಲಭ್ಯ ಒದಗಿಸಿ ಶ್ರೀ ಸಾರ್ವಜನಿಕರಿಗೆ ಶುದ್ಧ ನೀರು ದೊರಕಿಸಿ ಅನುಕೂಲ ಮಾಡಲಾಗುವುದು.
> ಜೆಸಿದ್ದರಾಮ ಮಾರಿಹಾಳ
ಪಪಂ ಅಧ್ಯ