ಮೂಲ್ಕಿ ವೆಂಕಟರಮಣ ದೇವಸ್ಥಾನಕ್ಕೆ ತಿಪ್ಪೇಸ್ವಾಮಿ ಭೇಟಿ

New Project (12)
Published on

ಮೂಲ್ಕಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ(ದಕ್ಷಿಣದ 4 ರಾಜ್ಯಗಳ) ಕಾರ್ಯವಾಹ ತಿಪ್ಪೇಸ್ವಾಮಿ ಅವರು ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು.

ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಘಚಾಲಕ ಯಶವಂತ್ ಸಾಲ್ಯಾನ್, ಮೂಲ್ಕಿ ಮತ್ತು ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪಾರ್ಥಸಾರಥಿ ಮತ್ತು ಶ್ರೀವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆ ಸಂಚಾಲಕ ಪಾಂಡುರಂಗ ಭಟ್ ಜತೆಗಿದ್ದರು. ದೇವಸ್ಥಾನದ ಪರ್ಯಾಯ ಅರ್ಚಕ ಎಂ.ವಿಶ್ವನಾಥ ಭಟ್ ಮತ್ತು ಪ್ರಭಂದಕ ನಾಗೇಶ ಪೈ ಅವರು ದೇವಳದ ವತಿಯಿಂದ ಸ್ವಾಗತಿಸಿ ಪ್ರಸಾದ ನೀಡಿದರು. ನಂತರ ಅವರು ದೇವಸ್ಥಾನದ ಗೋಶಾಲೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net