

ಬೀರೂರು: ಪಟ್ಪಣದಲ್ಲಿ ಗೃಹ ಮಂಡಳಿಯಿಂದ ಸೂಪರ್ ಮಾರ್ಕೆಟ್ ಸ್ಥಾಪನೆ ಉದ್ದೇಶವಿದೆ. ಬಡ ವರ್ಗದ ಜನರ ಹಳೇ ಮನೆಯನ್ನು ದುರಸ್ತಿ ಮಾಡಿಕೊಳ್ಳಲು ಯಾವುದೇ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡುತ್ತಿಲ್ಲ. ಆದ್ದರಿಂದ ಸಹಕಾರಿ ಹೌಸಿಂಗ್ ಸೊಸೈಟಿಯಿಂದ ಅಡಮಾನ ಸಾಲ ಸೌಲಭ್ಯ ಕಲ್ಪಿಸುವ ಚಿಂತನೆ ಮಾಡಲಾಗಿದೆ. ಇದಕ್ಕಾಗಿ ಸೊಸೈಟಿಯ ಬೈಲಾ ತಿದ್ದ್ದುಪಡಿ ಮಾಡಬೇಕಿದೆ ಎಂದು ದಿ ಹೌಸಿಂಗ್ ಬಿಲ್ಡಿಂಗ್ ಕೋ-ಆಪರೇಟೀವ್ ಸೊಸೈಟಿಯ ಅಧ್ಯಕ್ಷ ಬಿ.ಎಸ್.ಹರಿಪ್ರಸಾದ್ ತಿಳಿಸಿದರು.
ಸೊಸೈಟಿಯಲ್ಲಿ ಬುಧವಾರ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸೊಸೈಟಿಯು ಮೂಲ ಉದ್ದೇಶದ ಸೇವೆ ಸಲ್ಲಿಸುವುದರ ಜತೆಗೆ ಎಲ್ಲರ ಅಭಿವೃದ್ಧಿಗೆ ಕೊಡುಗೆ ನೀಡಲಿದೆ ಎಂದರು. ಕಾರ್ಯಕಾರಿ ಮಂಡಳಿ ಉಪಾಧ್ಯಕ್ಷ ಎಚ್.ವೆಂಕಟಗಿರಿಯಪ್ಪ, ಕಾರ್ಯದರ್ಶಿ ಸಿ.ಎಂ.ಷಡಾಕ್ಷರಿ, ನಿರ್ದೇಶಕರಾದ ವಿಶ್ವನಾಥಗೌಡ, ಎ.ಆರ್.ಪ್ರಕಾಶ್, ಎಂ.ಬಿ.ಗಿರೀಶ್, ಎಚ್.ನಾಗರಾಜ್, ಬಿ.ಎನ್.ನಾಗರತ್ನಮ್ಮ, ಬಿ.ಎಂ.ಮಂಜುನಾಥ್, ಬಿ.ಕೆ.ರಮೇಶ್, ದಾಕ್ಷಾಯಿಣಿ ಇದ್ದರು.