

ಚನ್ನರಾಯಪಟ್ಟಣ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜತೆಗೆ ಪಾಲಕರ ಸಹಕಾರವೂ ಮುಖ್ಯ ಎಂದು ನಾಗೇಶ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ನಾಗೇಶ್ ಹೇಳಿದರು.
ಪಟ್ಟಣದ ಜ್ಞಾನಸಾಗರ ಪಿಯು ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಚಿಂತಿಸುವ ಬದಲು ಚಿಂತನೆ ಮಾಡಬೇಕು ಎಂದರು.
ವಿಜ್ಞಾನ(ಪಿಸಿಎಂಬಿ) ವಿಭಾಗದಿಂದ 73 ವಿದ್ಯಾರ್ಥಿಗಳ ಪೈಕಿ 26 ಅತ್ಯುನ್ನತ ಶ್ರೇಣಿ, 42 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 9 ಅತ್ಯುನ್ನತ, 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದರು.
ವಿಜ್ಞಾನ ವಿಭಾಗದ ಕನ್ನಡ ವಿಷಯದಲ್ಲಿ 100 ಅಂಕ ಪಡೆದಿರುವ ಚಿನ್ಮಯಿಶ್ರೀ ಎ.ಎಸ್ ಹಾಗೂ ಶಶಿಧರ್.ಎನ್ ಎಂಬ ವಿದ್ಯಾರ್ಥಿಗೆ ಇದೇ ವೇಳೆ 10 ಸಾವಿರ ರೂ. ಗಳ ಚೆಕ್ ನೀಡಲಾಯಿತು. ಅಲ್ಲದೆ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.
ಸಂಸ್ಥೆಯ ಕಾರ್ಯಪಾಲಕ ನಿರ್ದೇಶಕಿ ಡಾ.ಭಾರತಿ ನಾಗೇಶ್, ಡೀನ್ ಸುಜಾ ಪಿಲಿಫ್, ಆಡಳಿತಾಧಿಕಾರಿ ಪಿಲಿಫ್, ಶಿಕ್ಷಕ ವೃಂದ ಹಾಗೂ ಇತರರು ಉಪಸ್ಥಿತರಿದ್ದರು.