

ಮೂಲ್ಕಿ: ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಮೂಲಕ ಸಾಧನೆಗೈದ ಸಾಧಕರನ್ನು ಯುವ ಸಮಾಜಕ್ಕೆ ಮಾದರಿಯಾಗಿ ಪರಿಚಯಿಸುತ್ತಿರುವುದು ಅಭಿನಂದನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿಯಲ್ಲಿ ಹೊಸ ಅಂಗಣದ ತಿಂಗಳ ಬೆಳಕು ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಸುರತ್ಕಲ್ ಎನ್‌ಐಟಿಕೆಯ ನಿವೃತ್ತ ಸಿಬ್ಬಂದಿ ಕೃಷ್ಣ ಪೂಜಾರಿ ಅವರನ್ನು ಗೌರವಿಸಲಾಯಿತು. ವಿಜಯ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ.ಸ್ಯಾಮ್ ಮಾಬೆನ್, ಎಂ.ಆರ್.ಪೂಂಜ ಕೈಗಾರಿಕಾ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ವೈ.ಎನ್.ಸಾಲ್ಯಾನ್, ನಿವೃತ್ತ ಬ್ಯಾಂಕ್ ಅಧಿಕಾರಿ ಪುರುಷೋತ್ತಮ ಶೆಟ್ಟಿ, ಉದ್ಯಮಿ ಜಯಕೃಷ್ಣ ಕೋಟ್ಯಾನ್ ಹಳೆಯಂಗಡಿ, ಸಂಘಟಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ಜೆ.ಸಿ.ದಿನೇಶ್ ಶೆಟ್ಟಿ, ರವಿಚಂದ್ರ ರಾವ್, ವಿಜಯ್ ಕುಮಾರ್ ಕುಬೆವೂರು, ಸಾಮಾಜಿಕ ಕಾರ್ಯಕರ್ತ ನಂದಪಾಯಸ್, ವಾಮನ್ ಕೋಟ್ಯಾನ್ ನಡಿಕುದ್ರು ಮತ್ತಿತರರು ಉಪಸ್ಥಿತರಿದ್ದರು. ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಸ್ವಾಗತಿಸಿದರು. ರವಿಚಂದ್ರ ನಿರೂಪಿಸಿದರು. ವಾಮನ ಕೋಟ್ಯಾನ್ ವಂದಿಸಿದರು.