ನಾಟಕಗಳು ಸಾಮಾಜಿಕ ಸಂದೇಶ ಸಾರುತ್ತವೆ

oppo_0
oppo_0
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾಜದಲ್ಲಿ ನಡೆಯುವ ಘಟನೆ, ಸಮಸ್ಯೆಗಳು ಸೇರಿ ಹಲವಾರು ಪ್ರಚಲಿತ ವಿದ್ಯಮಾನಗಳ ಕುರಿತು ನಾಟಕಗಳು ಜನರಿಗೆ ಅರ್ಥಪೂರ್ಣವಾದ ಸಾಮಾಜಿಕ ಸಂದೇಶಗಳನ್ನು ನೀಡುತ್ತವೆ ಎಂದು ರಂಗ ನಿರ್ದೇಶಕರಾದ ಡಾ. ಪ್ರಕಾಶ ಗರುಡ ಹೇಳಿದರು.
ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಂಗಭೂಮಿಯು ಜನರಿಗೆ ಹಲವಾರು ವಿಷಯಗಳ ಕುರಿತು ಮನವರಿಕೆ ಮಾಡಿ ತಿಳಿವಳಿಕೆ ಮೂಡಿಸುತ್ತದೆ. ನೋಡುಗರಿಗೆ ಮನರಂಜನೆಯೊAದಿಗೆ ಮಾಹಿತಿ ನೀಡುತ್ತವೆ. ರಂಗಾಯಣವು ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿಸುವ ಮೂಲಕ ರಂಗಭೂಮಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಮಾತನಾಡಿ, ಆಧುನಿಕ ಭರಾಟೆಯಲ್ಲಿ ನಾಟಕಗಳು ನಶಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ರಂಗಾಯಣವು ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಭೂಮಿಯನ್ನು ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.
ರAಗಾಯಣ ಆಡಳಿತಾಽಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ಶಕೀಲ್ ಅಹ್ಮದ್ ನಿರ್ದೇಶಿಸಿದ `ತಿಂಡಿಗೆ ಬಂದ ತುಂಡೇರಾಯ' ನಾಟಕವನ್ನು ನಿರ್ದಿಗಂತ ಕಲಾವಿದರು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net