ತಿಮ್ಮಸಾಗರ ಗ್ರಾಮದೇವಿ ಜಾತ್ರೆ ಸಂಪನ್ನ

Thimmasagar Grama Devi Fair is a success
Thimmasagar Grama Devi Fair is a success
Published on

ಗುಳೇದಗುಡ್ಡ: ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ತಿಮ್ಮಸಾಗರ ಗ್ರಾಮದ ಗ್ರಾಮದೇವತೆ ದ್ಯಾಮವ್ವಮ್ಮನ ಜಾತ್ರೆ ಬುಧವಾರ ಸಡಗರದಿಂದ ನೆರವೇರಿತು.

ಬೆಳಗ್ಗೆಯಿಂದಲೇ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ದೇವಸ್ಥಾನದಿಂದ ಹೊರಟು ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ದೇವಿಗೆ ಉಡಿ ತುಂಬಿದರು.

ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಾದ ಕೆಲವಡಿ, ಲಿಂಗಾಪುರ, ತೋಗಣಿಸಿ, ತೆಗ್ಗಿ ಸೇರಿ ಹಲವಾರು ಗ್ರಾಮಗಳ ಭಕ್ತರು ದೇವಿಗೆ ಹೂವು, ಹಣ್ಣು, ಕಾಯಿ, ಎಲೆ, ಅಡಕೆ, ಬಳೆ ಉಡಿ ತುಂಬಿ ಪ್ರಾರ್ಥನೆ ಮಾಡಿದರು.

ಮಧ್ಯಾಹ್ನ ಹೊಳಿಗೆ, ಮಾವಿನ ಹಣ್ಣಿನ ಸೀಕರಣೆ, ಅನ್ನ-ಸಾಂಬಾರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಮಾಂಗಲ್ಯ ಮಾರಿದ ಮಡದಿ ನಾಟಕ ಪ್ರದರ್ಶನ ನಡೆಯಿತು.

ಜಾತ್ರಾ ಮಹೋತ್ಸವದಲ್ಲಿ ಮುತ್ತನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಜ್ಯೋತಿ ಪೂಜಾರ, ಮುತ್ತಪ್ಪ ಕಳನ್ನವರ, ಮುತ್ತಪ್ಪ ತೆಗ್ಗಿ, ಮಂಜುನಾಥ ಮುಗಳೊಳ್ಳಿ, ಶಂಕ್ರಯ್ಯ ವಿಭೂತಿ, ಮಲ್ಲನಗೌಡ ಗೌಡರ, ಗದಿಗೆಪ್ಪ ದೇವರಮನಿ, ಚಂದ್ರಶೇಖರ ಕಾಳನ್ನವರ, ರಾಮನಗೌಡ ಗೌಡ್ರ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net