ಮಾಜಿ ಪೈಲವಾನರ ಯೋಗಕ್ಷೇಮ ವಿಚಾರಿಸಿದ ತಿಮ್ಮಾಪೂರ

Thimmapura inquired about the welfare of the ex-Pailavans
ಮುಧೋಳದ ಕುಸ್ತಿಪಟುಗಳ ಮನೆಗೆ ಭೇಟಿ ನೀಡಿದ ಸಚಿವ ತಿಮ್ಮಾಪೂರ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಉದಯಸಿಂಗ ಪಡತಾರೆ, ಶೇಖರ ಗಡ್ಡಿ, ಮಲ್ಲಪ್ಪಗೌಡ ನಾಡಗೌಡ, ಶಿವಾಜಿ ಕಾಟೆ, ವಿಠ್ಠಲ ನಲವಡೆ, ಸಂತೋಷ ಕಾಟೆ, ಶಂಕರ ಶಿಂಧೆ, ಗಜಾನನ ನಲವಡೆ, ಅನೀಲ ಗವಳಿ, ಪಿಎಸ್‌ಐ ಸಂಗಮೇಶ ಹೊಸಮನಿ ಮುಂತಾದವರಿದ್ದರು
Published on

ಮುಧೋಳ: ಹೊರವಲಯಲ್ಲಿರುವ ಮಾಜಿ ಪೈಲವಾನ ಬಸವಂತದಾದಾ ಕಾಟೆ ಅವರ ತೋಟದ ಮನೆಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ಸಿಂಗಾಪುರದಲ್ಲಿ ನಡೆದ ಕಾಮನ್‌ವೆಲ್ತ್ ಕುಸ್ತಿಯಲ್ಲಿ ಭಾರತ ದೇಶ ಪ್ರತಿನಿಧಿಸಿ ರಜತ ಪದಕ ಪಡೆದ ಬಸವಂತದಾದಾ ಅವರ ಪುತ್ರ ಸಂದೀಪ ಕಾಟೆ ಹಾಗೂ ಮೊಮ್ಮಕ್ಕಳಾದ ಕರ್ನಾಟಕ ದಸರಾ ಕೇಸರಿ ಪುರಸ್ಕೃತ ಸದಾಶಿವ ನಲವಡೆ, ಬಾಪೂಸಾಹೇಬ ಶಿಂಧೆ ಹಾಗೂ ಇತರ ಕುಸ್ತಿಪಟುಗಳು ಮತ್ತು ತರಬೇತುದಾರರನ್ನು ಸಚಿವರು ಭೇಟಿಯಾಗಿ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಮಹಾರಾಜರ ಕಾಲದಿಂದಲೂ ಈ ಭಾಗದಲ್ಲಿ ಕುಸ್ತಿಗೆ ಮಹತ್ವ ನೀಡಲಾಗಿದೆ. ಈಗಾಗಲೇ ಅನೇಕ ಪೈಲವಾನರು ರಾಜ್ಯ,ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಕುಸ್ತಿ ಪರಂಪರೆ ಮುಂದುವರಿಸುವ ಜತೆಗೆ ಮುಂದಿನ ದಿನಗಳಲ್ಲಿ ಕುಸ್ತಿ ಕ್ರೀಡೆ ಹಾಗೂ ಕುಸ್ತಿಪಟುಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸಚಿವ ತಿಮ್ಮಾಪೂರ ಭರವಸೆ ನೀಡಿದರು.

ಪ್ರಮುಖರಾದ ಉದಯಸಿಂಗ ಪಡತಾರೆ, ಶೇಖರ ಗಡ್ಡಿ, ಮಲ್ಲಪ್ಪಗೌಡ ನಾಡಗೌಡ, ಶಿವಾಜಿ ಕಾಟೆ, ವಿಠ್ಠಲ ನಲವಡೆ, ಸಂತೋಷ ಕಾಟೆ, ಶಂಕರ ಶಿಂದೆ, ಗಜಾನನ ನಲವಡೆ, ಅನೀಲ ಗವಳಿ, ಪಿಎಸ್‌ಐ ಸಂಗಮೇಶ ಹೊಸಮನಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net