

ಬಾದಾಮಿ: ಪಟ್ಟಣದ ಬಾದಾಮಿ ತಾಲೂಕು ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ತಿಮ್ಮಣ್ಣ ಮೆಳ್ಳಿ, ಉಪಾಧ್ಯಕ್ಷರಾಗಿ ಬಸವರಾಜ ಹಿರೇಹಾಳ ಅವಿರೋಧ ಆಯ್ಕೆಯಾದರು.
ಪಟ್ಟಣದ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಿಮ್ಮಣ್ಣ ರಾಯಪ್ಪ ಮೆಳ್ಳಿ, ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಚನ್ನಬಸಪ್ಪ ಹಿರೇಹಾಳ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಅವಿರೋಧ ಆಯ್ಕೆ ಮಾಡಲಾಯಿತೆಂದು ಚುನಾವಣಾ ಅಧಿಕಾರಿ ಎಸ್.ಎಂ. ಕೆಲೂಡಿ ತಿಳಿಸಿದ್ದಾರೆ.
ತಿಮ್ಮಣ್ಣ ರಾಯಪ್ಪ ಮೆಳ್ಳಿ ಅವರು ಸತತ 9ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಸೊಲಿಲ್ಲದ ಸರದಾರರಾಗಿ ಹೊರಹೊಮ್ಮಿದ್ದಾರೆ.
ನಿರ್ದೇಶಕರಾದ ಗಂಗಯ್ಯ ಸರಕಾರ, ಮಾಗುಂಡಪ್ಪ ಮಣ್ಣೂರ, ಪ್ರಕಾಶಗೌಡ ತಿರಕನಗೌಡ್ರ, ಅಡಿವೆಪ್ಪ ಢಾಣಕಶಿರೂರ, ಶಿವಪ್ಪ ಮೇಟಿ, ರಾಘವೇಂದ್ರ ಮೆಳ್ಳಿ, ಶಂಕ್ರವ್ವ ಹುಲ್ಲೂರ, ಪುಷ್ಪಾ ಹಿರೇಮಠ, ಶಂಕ್ರಪ್ಪ ಗುಡಿಮನಿ, ರಾಮಪ್ಪ ಕೊಳ್ಳನ್ನವರ, ವ್ಯವಸ್ಥಾಪಕ ಆರ್.ಬಿ. ಬೂದಿ ಇತರರಿದ್ದರು.