ಸಿನಿಮಿಯ ರೀತಿಯಲ್ಲಿ‌ ಚಿನ್ನಾಭರಣ ದೋಚಿದ ಕಳ್ಳರು!

IMG_20230605_121228.jpg
Published on

ಬೆಳಗಾವಿ: ಮಹಾರಾಷ್ಟ್ರ ದ ಗಡಿ ಸಾಂಗ್ಲಿ- ಮೀರಜ್ ರಸ್ತೆಯಲ್ಲಿರುವ ರಿಲಯನ್ಸ್ ನ ಚಿನ್ನಾಭರಣ ಶೋ ರೂಂನಲ್ಲಿ ಭಾನುವಾರ ಹಾಡುಹಗಲೆ ಸಿನಿಮಿಯ ಮಾದರಿಯಲ್ಲಿ ಚಿನ್ನಾಭರಣ ಕಳ್ಳತನ ನಡೆದಿದೆ.
ಶೋ ರೂಂ ಒಳಗೆ ನುಗ್ಗಿದ ಕಳ್ಳರು, ಗನ್ ನಿಂದ ಗುಂಡು ಹಾರಿಸಿ ಎಲ್ಲರನ್ನು ಬೆದರಿಸಿ ಚಿನ್ನಾಭರಣ ಧರೋಡೆ ಮಾಡಿದ್ದಾರೆ. 8ರಿಂದ 10 ಜನರಿದ್ದ ಕಳ್ಳರ ಗುಂಪು, ಎಲ್ಲರ ಕೈಕಾಲು ಕಟ್ಟಿ ಬಂಗಾರ ದೋಚಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನ‌ ತಡೆಯಲು ಪ್ರಯತ್ನಿಸಿದ ಮ್ಯಾನೇಜರ್‌ಗೆ ಥಳಿಸಿದ್ದಾರೆ. ಶೋರೂಂನಿಂದ ಹೊರ ಹೋಗುವಾಗ ಗ್ರಾಹಕರ ಮೇಲೂ ಗುಂಡು ಹಾರಿಸಿದ್ದಾರೆ. ಸ್ಥಳೀಯ ಸಿಬಿಐ ಹಾಗೂ ವಿಶ್ರಂಬಾಗ್ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲಿಸಿದ್ದಾರೆ. ಸಾಂಗ್ಲಿ ಜಿಲ್ಲಾ ಪೊಲೀಸರಿಂದ‌ ಕಳ್ಳರ ಬಲೆಗೆ ತಂಡ ರಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net