ದೇವರ ಹುಂಡಿ ಕದ್ದೊಯ್ದ ಕಳ್ಳರು

Ksd_Temple Theft
Published on

ಮೈಸೂರು: ಮೈಸೂರು ತಾಲೂಕಿನ ಸಜ್ಜೆಹುಂಡಿ ಗ್ರಾಮದಲ್ಲಿ ಲಕ್ಷ್ಮೀದೇವಿ ದೇವಾಲಯದ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿರುವ ಕಳ್ಳರು, ಹುಂಡಿ ಹಣ ಸೇರಿದಂತೆ 6.98 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.


ಅರ್ಚಕ ಕೋಡಿ ನಾರಾಯಣಸ್ವಾಮಿ ಅವರು ಪೂಜಾಕಾರ್ಯಗಳನ್ನು ಮುಗಿಸಿ ದೇವಾಲಯಕ್ಕೆ ಬೀಗ ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಬಂದಾಗ ಕಳವು ಗೊತ್ತಾಗಿದೆ.


ಸುಮಾರು 40 ಸಾವಿರ ರೂ. ಸಂಗ್ರಹವಾಗಿದ್ದ ಹುಂಡಿ, 19 ಕೆಜಿ ಕಂಚಿನ ವಿಗ್ರಹಗಳು, ಬೆಳ್ಳಿ ವಿಗ್ರಹಗಳು, 30 ಗ್ರಾಂ ಚಿನ್ನಾಭರಣಗಳನ್ನು ಕದ್ದು ಹೋಗಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ವರುಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net