ಮೈಸೂರಿನಲ್ಲಿ ಯುವತಿಯ ಚಿನ್ನದ ಸರ ಕಸಿದು ಬೈಕ್ ನಲ್ಲಿ ಪರಾರಿಯಾದ ಕಳ್ಳರು

udp-chain
Published on

ಮೈಸೂರು: ಜಯನಗರದಲ್ಲಿ ಮಂಗಳವಾರ ಬೈಕ್‌ನಲ್ಲಿ ಆಗಮಿಸಿದ ಕಳ್ಳರು ಯುವತಿಯ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.

ಬಡಾವಣೆ ನಿವಾಸಿ ದಾಕ್ಷಾಯಿಣಿ ಚಿನ್ನ ಕಳೆದುಕೊಂಡವರು. ಜಯನಗರದ 12ನೇ ಕ್ರಾಸ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಆಗಮಿಸಿದ ಕಳ್ಳರು 16 ಗ್ರಾಂ ತೂಕದ ಚಿನ್ನದ ಸರ ಕಳೆದು ಪರಾರಿಯಾದರು. ಅಶೋಕಪುರಂ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net