

ಚಿಕ್ಕಬಳ್ಳಾಪುರ: ಕುಟುಂಬ ಸಮೇತ ದೇವಸ್ಥಾನ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ನಗದು, ಹಣ ಕದ್ದು ಪರಾರಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಗಂಗಮನಿದ್ದೆಯ ಮಂಜುನಾಥ ಮನೆಯಲ್ಲಿ ಕಳ್ಳತನವಾಗಿರುವುದು. ಕಳೆದ ಮೇ.25 ರಂದು ಕುಟುಂಬಸ್ಥರೊಂದಿಗೆ ಕದಿರಿ ದೇವಸ್ಥಾನಕ್ಕೆ ಮಂಜುನಾಥ್ ಹೋಗಿದ್ದು ಮಾರನೇಯ ದಿನ ನೆರೆಹೊರೆ ಮನೆಯವರು ಮೊಬೈಲ್ ಮೂಲಕ ಯಾರೋ ಮನೆಯ ಬಾಗಿಲು ಹೊಡೆದು ಹಾಕಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಮನೆಗೆ ಬಂದು ಪರಿಶೀಲಿಸಿದಾಗ ಮನೆಯಲ್ಲಿನ ಪರಿಕರಗಳು ಚೆಲ್ಲಾಪಿಲ್ಲಿಯಾಗಿದ್ದು ಬೀರುವಿನಲ್ಲಿದ್ದ 44 ಗ್ರಾಂ ತೂಕದ ಚಿನ್ನದ ಉರಿ ಚೈನು ಮತ್ತು ಗಣೇಶ ಡಾಲರ್, 170 ಗ್ರಾಂ ತೂಕದ 3 ಜೊತೆ ಬೆಳ್ಳಿಯ ಕಾಲು ಚೈನು, 178 ಗ್ರಾಂ ತೂಕದ 1 ಬೆಳ್ಳಿಯ ಲಕ್ಷ್ಮೀ ಮುಖವಾಡ, 57,000 ರೂ ನಗದು ಕಳವಾಗಿರುವುದು ಗೊತ್ತಾಗಿದೆ.
ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು, ಒಳಗೆ ಹೋಗಿ ನಗದು ಮತ್ತು ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಮಂಜುನಾಥ್ ದೂರು ನೀಡಿದ್ದಾರೆ. ಚಿಕ್ಕಬಳ್ಳಾಪುರ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.