ಮಾನ್ವಿ: ತಾಲೂಕಿನ ಪೋತ್ನಾಳ ಗ್ರಾಮದ ಕಾಂತಪ್ಪಗೌಡ ಮನೆಯಲ್ಲಿನ ಚಿನ್ನಾಭರಣವನ್ನು ಕಳ್ಳರು ಮಂಗಳವಾರ ರಾತ್ರಿ ದೋಚಿದ್ದಾರೆ.
ಕಾಂತಪ್ಪಗೌಡ ಕುಟುಂಬಸಮೇತರಾಗಿ ಸಮೀಪದ ಯಾಪಲಪರ್ವಿ ಗ್ರಾಮದ ಜಾತ್ರೆಗೆ ಹೋಗಿದ್ದರು.
ಮನೆಯಲ್ಲಿದ್ದ 10.5 ತೊಲ ಬಂಗಾರ, 2 ಲಕ್ಷ ರೂ.ಕಳವಾಗಿದೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪಿಐ ವೀರಭದ್ರಯ್ಯಸ್ವಾಮಿ, ಬೆರಳಚ್ಚು ತಜ್ಞರು, ಶ್ವಾನದಳ ತಂಡ ಭೇಟಿ ಪರಿಶೀಲನೆ ನಡೆಸಿದರು.