

ರಾಯಚೂರು ನಗರದ ರಂಗಮAದಿರ ಹಿಂಭಾಗದ ಪ್ರಶಾಂತ್ ನಗರದ ನಿವಾಸಿ ಎ,ಕೆ.ವೀರೇಶ ಮನೆ ಕಳುವುವಾದ ಪ್ರಕರಣ ಭಾನುವಾರ ತಡರಾತ್ರಿ ಜರುಗಿದೆ.
ಕೆಕೆಎಸ್‌ಟಿಸಿಯಲ್ಲಿ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿರುವ ಎ.ಕೆ.ವಿರೇಶ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದು ಏಳು ತೊಲೆ ಬಂಗಾರ ಮತ್ತು ಒಂದು ಲಕ್ಷ ರೂ ನಗದು ಹಣ ದೋಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೇಸಿಗೆ ಹಿನ್ನಲೆಯಲ್ಲಿ ಪಕ್ಕದ ಮಲಗಿದ್ದ ಯಾರು ಇಲ್ಲದೇ ಇರುವದನ್ನು ಗಮನಿಸಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೊದಲ ಮಹಡಿಯಲ್ಲಿರುವ ಮನೆ ಬಾಗಿಲ ಕೊಂಡಿಯನ್ನು ಕಿಡಕಿಯಿಂದ ತೆಗೆದು ಹಾಲಮಾರಿ ಮರಿಲ್ಲಿರು ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಎಸ್‌ಪಿ ಹರೀಶ, ಪಶ್ಚಿಮ ಠಾಣೆಯಪಿಎಸ್‌ಐ ಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.