ಮಾಜಿ ಸಚಿವರ ಮನೆಯಲ್ಲೇ ರಾಜಾರೋಷವಾಗಿ ಕಳ್ಳತನ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮೈಸೂರು: ಮುಖಕ್ಕೆ ಮಾಸ್ಕ್ ಹಾಕಿಕೊಂಡ ಕಳ್ಳರು, ರಾಜಾ ರೋಷವಾಗಿ ,ಮಾಜಿ ಸಚಿವರ ಮನೆಗೆ ನುಗ್ಗಿದ್ದರು! ಹೌದು, ಮೈಸೂರಿನಲ್ಲಿ ವಾಸವಿರುವ ಮಾಜಿ ಸಚಿವರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಈ ಕಳ್ಳರು, ಮಾಜಿ ಸಚಿವರ ಮನೆಯ ಐಷಾರಾಮಿ ಕಾರು ಕಳ್ಳತನ ಮಾಡಿದ್ದಾರೆ. ಮೂವರು ಮುಸುಕುದಾರಿಗಳು ಮೈಸೂರಿನ ವಿಜಯನಗರದ ಮೂರನೇ‌ ಹಂತದಲ್ಲಿರುವ ಮಾಜಿ ಸಚಿವರ ಮನೆಗೆ ನುಗ್ಗಿದ್ದು ಈ ಸಂದರ್ಭ ಕಾರು ಕಳ್ಳತನ ಮಾಡಿದ್ದಾರೆ.

ಮಾಜಿ ಸಚಿವ ಕೋಟೆ ಶಿವಣ್ಣ ಅವರ ಇನ್ನೋವಾ ಕಾರನ್ನು ಕದಿಯಲಾಗಿದ್ದು ಕಳ್ಳರ‌ ಕರಾಮತ್ತು ಸಿಸಿ.ಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ನಿನ್ನೆ (ಜೂನ್ 6) ಮಧ್ಯರಾತ್ರಿ 1 ಗಂಟೆಗೆ ನಡೆದಿದ್ದ ಕಾಂಪೌಂಡ್ ಹಾರಿ ಬಂದು ಮನೆಯಲ್ಲಿ ಇಡಲಾಗಿದ್ದ ಕಾರಿನ ಕೀಯನ್ನು ಕಳ್ಳರು ಎಗರಿಸಿದ್ದಾರೆ. ನಂತರ ಕಾರನ್ನು ರಾಜಾರೋಷವಾಗಿ ಕದ್ದಿದ್ದಾರೆ. ಈ ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net