ಮೈಸೂರು: ವಿಜಯನಗರ 4ನೇ ಹಂತದಲ್ಲಿ ಇತ್ತೀಚೆಗೆ ಮನೆಯೊಂದರ ಬೀಗ ಮುರಿದು 9 ಲಕ್ಷ ರೂ. ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ.
ಬಡಾವಣೆ ನಿವಾಸಿ ಲಕ್ಷ್ಮೀ ನಾರಾಯಣ ಮನೆಯಲ್ಲಿ ಕಳವು ನಡೆದಿದೆ. ಲಕ್ಷ್ಮೀ ನಾರಾಯಣ ಅವರು ಸಂಬಂಧಿಕರ ಮನೆಗೆ ತೆರಳಿ ಹಿಂತಿರುಗಿದಾಗ ಮನೆಯಲ್ಲಿ ಕಳವು ನಡೆದಿರುವುದು ಕಂಡು ಬಂತು. ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.