

ಚಿಕ್ಕಬಳ್ಳಾಪುರ: ಮನೆಯ ಮುಂಭಾಗದಲ್ಲಿ ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಒಳಗೆ ಪ್ರವೇಶಿಸಿರುವ ಕಳ್ಳರು, ಚಿನ್ನಾಭರಣಗಳು ಮತ್ತು ನಗದು ಜತೆಗೆ ಪ್ರಮುಖ ದಾಖಲೆಗಳನ್ನು ಕದ್ದು ಪರಾರಿಯಾಗಿದ್ದಾರೆ. ಚಿನ್ನ ವೆಂಕಟರವಣಪ್ಪ ಎಂಬುವರ ಮನೆಯಲ್ಲಿಯೇ ಕಳ್ಳರು ಕೈ ಚಳಕ ತೋರಿಸಿದ್ದು ಬಾಗೇಪಲ್ಲಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
*ಪ್ರಕರಣದ ಹಿನ್ನೆಲೆ
ಬೆಳಿಗ್ಗೆ ಚಿನ್ನ ವೆಂಕಟರವಣಪ್ಪ ಕುರಿ ಮೇಯಿಸಲು, ಈತ ಹೆಂಡತಿ ಮುನಿಯಮ್ಮ ತೋಟದ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಬೀಗ ಕೀಲಿ ಕೈಯನ್ನು ಬಚ್ಚಲು ಮನೆಯಲ್ಲಿಟ್ಟಿದ್ದರು. ಇದರ ನಡುವೆ ಸಂಜೆ ವಾಪಸ್ಸು ಬಂದಾಗ ಮೊಮ್ಮಕ್ಕಳು ಮನೆಯ ಮುಂದೆ ಆಟವಾಡುತ್ತಿದ್ದರು. ಇದೇ ವೇಳೆ ಮನೆಯಲ್ಲಿದ್ದ ಎರಡು ಬೀರುಗಳನ್ನು ಹೊಡೆದು ಹಾಕಿದ್ದು ಮಕ್ಕಳನ್ನು ಕೇಳಿದಾಗ ಬೀಗದ ಕೈ ತೆಗೆದುಕೊಂಡು, ಮನೆಯೊಳಗೆ ಶಾಲಾ ಬ್ಯಾಗುಗಳನ್ನಿಟ್ಟಿದ್ದು ಬಳಿಕ ಮೂಲ ಸ್ಥಳದಲ್ಲಿಯೇ ಬೀಗದ ಕೈಯನ್ನಿಟ್ಟು ಆಟವಾಡಿಕೊಳ್ಳುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ.
ಬಚ್ಚಲು ಮನೆಯಲ್ಲಿಟ್ಟದ್ದ ಬೀಗದ ಕೈಯನ್ನು ಯಾರೋ ಕಳ್ಳರು ನೋಡಿಕೊಂಡಿದ್ದು ಬೀಗವನ್ನು ತೆಗೆದು ಮನೆಯೊಳಗೆ ಪ್ರವೇಶಿಸಿಸಿ ಬೀರುವುಗಳಲ್ಲಿದ್ದ 10 ಸಾವಿರ ರೂ ನಗದು ಹಣ, ಬಂಗಾರದ ಕಳಾವರ್ 1 ಜೊತೆ ಹಾಗೂ ಬಂಗಾರದ ಮೂಗುತಿ, ಮಕ್ಕಳ ಕಾಲಿನ ಬೆಳ್ಳಿಯ ಚೈನ್, ಕೈ ಖಡಗವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಇದೇ ವೇಳೆ ಖಾಸಗಿ ಫೈನಾನ್ಸ್ ನಲ್ಲಿ ಅಡ ಇಟ್ಟಿರುವ ಪತ್ರಗಳನ್ನು ಸಹ ಎತ್ತಿಕೊಂಡು ಹೋಗಿದ್ದಾರೆ ಎಂದು ಮನೆಯ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.