

ಹುಬ್ಬಳ್ಳಿ: ಇಲ್ಲಿಯ ಚಾಣಕ್ಯಪುರಿ ಪೊಲೀಸ್ ಕ್ವಾರ್ಟರ್ಸ್ ಹಾಗೂ ಸಿಎಆರ್ ಮೈದಾನದಲ್ಲಿನ ಪೊಲೀಸರ ಮನೆಗಳಲ್ಲಿ ಕಳ್ಳರು ಕೈಚಳಕ ತೋರಿದ್ದು, ನಗ-ನಗದ ಕಳವು ಮಾಡಿದ್ದಾರೆ.
ಚಾಣಕ್ಯಪುರಿ ಪೊಲೀಸ್ ಕ್ವಾರ್ಟರ್ಸ್‌ನಲ್ಲಿದ್ದ ಯಲ್ಲಪ್ಪ ದೊಡ್ಡಮನಿ ಅವರು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರು. ಜು. 19ರಂದು ಮನೆಗೆ ಬಂದಾಗ ಕಳವಾಗಿರುವುದು ಗೊತ್ತಾಗಿದೆ. ಬಾಗಿಲ ಬೀಗ ಮುರಿದ ಮನೆ ಪ್ರವೇಶಿಸಿದ್ದ ಕಳ್ಳರು, ಬೆಡ್‌ರೂಮ್‌ನಲ್ಲಿದ್ದ ತಿಜೋರಿ ಲಾಕ್ ಓಪನ್ ಮಾಡಿ 40 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಆಭರಣ ಹಾಗೂ 40 ಸಾವಿರ ರೂ. ನಗದು ಕಳವು ಮಾಡಿದ್ದಾರೆ. ಅದೇ ರೀತಿ ಸಿಎಆರ್ ಮೈದಾನ ಹತ್ತಿರದ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ದ್ದ ಸುನೀಲಕುಮಾರ ಲಂಬಾಣಿ ಅವರ ಮನೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿ ಆಭರಣ ಕಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.