ಹಣದ ಚೀಲ ಹೊತ್ತೊಯ್ದ ಕಳ್ಳರು

WEB LOGO
Published on

ಕುಮಟಾ: ವ್ಯಾಪಾರ ಮುಗಿಸಿ ಮನೆಗೆ ತೆರಳಲು ಮಳಿಗೆಯ ಶಟರ್ ಹಾಕುತ್ತಿದ್ದ ಸಂದರ್ಭದಲ್ಲಿ ವ್ಯಾಪಾರಿಯ ಲಕ್ಷಾಂತರ ಹಣವಿದ್ದ ಚೀಲವನ್ನು ಕಳ್ಳರು ದೋಚಿದ ಘಟನೆ ಪಟ್ಟಣದ ಗಿಬ್ ವೃತ್ತದ ಹುಲಿದೇವರ ಕಟ್ಟೆ ಬಳಿ ಮಂಗಳವಾರ ರಾತ್ರಿ ನಡೆದಿದೆ.

ಬೆಣ್ಣೆ ಗ್ರೂಪ್ಸ್‌ನ ಹೆರವಟ್ಟಾದ ಶಶಿಕಾಂತ ಹನುಮಂತ ನಾಯಕ ಬೆಣ್ಣೆ ಎಂಬುವವರು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ದಿನದ ಕೆಲಸ ಮುಗಿಸಿ ಹಣವಿದ್ದ ಚೀಲವನ್ನು ಮಳಿಗೆಯ ಎದುರಿಗಿದ್ದ ಬೈಕಿನಲ್ಲಿಟ್ಟು ಶಟರ್ ಹಾಕುತ್ತಿದ್ದರು. ಈ ಸಂದರ್ಭಕ್ಕಾಗಿ ಹೊಂಚುಹಾಕಿದ್ದ ಕಳ್ಳರು ಬೈಕ್‌ನಲ್ಲಿಟ್ಟಿದ್ದ ಹಣದ ಚೀಲವನ್ನು ಎಗರಿಸಿದ್ದಾರೆ.

ಚೀಲದಲ್ಲಿ 2,57,000 ರೂ, ಮೊಬೈಲ್ ಫೋನ್ ಹಾಗೂ ಸ್ಟೆಷನರಿ ಸಾಮಗ್ರಿಗಳು ಇದ್ದವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವ್ಯಾಪಾರಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net