ಬೊಲೆರೋದಲ್ಲಿ 22 ಮೇಕೆ ಹೊತ್ತೊಯ್ದ ಕಳ್ಳರು ಕಳ್ಳತನ

Untitled
Published on

ಧಾರವಾಡ: ಜಮೀನಿನಲ್ಲಿದ್ದ ಶೆಡ್‌ನಲ್ಲಿ ಕಟ್ಟಿದ್ದ 22 ಮೇಕೆಗಳನ್ನು ಕಳ್ಳತನ ಮಾಡಿರುವ ಘಟನೆ ತಾಲೂಕಿನ ನಿಗದಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಮಲ್ಲನಗೌಡ ಪಾಟೀಲ ಎಂಬ ರೈತ ಕೃಷಿಯ ಜೊತೆಗೆ ಮೇಕೆ ಸಾಕಾಣಿಕೆ ಮಾಡುತ್ತಿದ್ದರು.

ಜಮೀನಿನ ಶೆಡ್‌ನಲ್ಲಿ ಕಟ್ಟಿದ್ದ ಹಾಲುಣಿಸುವ ೨೨ ಮೇಕೆಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಮರಿಗಳನ್ನು ಬಿಟ್ಟು ಹೋಗಿದ್ದರಿಂದ ರೈತ, ಅವುಗಳಿಗೆ ಬಾಟಲಿ ಹಾಲು ಕುಡಿಸುವಂತಾಗಿದೆ. ಕಳ್ಳರು ಬೊಲೆರೋ ವಾಹನದಲ್ಲಿ ಮೇಕೆಗಳನ್ನು ಕಳ್ಳತನ ಮಾಡಿಕೊಂಡು ಹೋಗುವ ದೃಶ್ಯ ಅದೇ ಮಾರ್ಗದ ಸಿಸಿ ಟಿವಿಯೊಂದರಲ್ಲಿ ಸೆರೆಯಾಗಿದೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net