ಹಳೆಯಂಗಡಿ ಮಠದಿಂದ ‌6 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ಕಳವು

WhatsApp Image 2021-07-13 at 11.59.35 AM (1)
Published on

ಹಳೆಯಂಗಡಿ: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಆಭರಣ ಹಾಗೂ ಕಾಣಿಕೆ ಡಬ್ಬಿ ಸಹಿತ 6 ಲ.ರೂ. ಮೌಲ್ಯದ ಸೊತ್ತು ಕಳವು ಮಾಡಿದ್ದಾರೆ.
ಮಠದ ಹಿಂದಿನ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ವಿನಾಯಕ ದೇವರ ಮತ್ತು ಶ್ರೀ ದೇವಿಯ ಬೆಳ್ಳಿಯ ಪ್ರಭಾವಳಿಗಳು ಎರಡೂ ದೇವರ ಬೆಳ್ಳಿಯ ಮುಖ ಕವಚಗಳು ಹಾಗೂ ಇನ್ನಿತರ ಚಿನ್ನ ಹಾಗು ಬೆಳ್ಳಿಯ ಆಭರಣ ಸೇರಿದಂತೆ ಎರಡು ಕಾಣಿಕೆ ಡಬ್ಬಿಗಳನ್ನು ಕಳ್ಳರು ಹೊತ್ತೊಯ್ದಿದಿದ್ದಾರೆ. ಸುಮಾರು 7 ಕೆಜಿ ಬೆಳ್ಳಿ ಹಾಗೂ ಒಂಬತ್ತು ಗ್ರಾಂ ಚಿನ್ನದ ದೇವರ ಆಭರಣಗಳು ಕಳವಾಗಿದೆ ಎಂದು ಅಂದಾಜಿಸಲಾಗಿದೆ.
ನಿನ್ನೆ ರಾತ್ರಿ ಸುರಿಯುತ್ತಿದ್ದ ಧಾರಾಕಾರ ಮಳೆಯಲ್ಲಿ ಘಟನೆ ನಡೆದಿದ್ದು ಸ್ಥಳೀಯವಾಗಿ ಯಾರ ಗಮನಕ್ಕೂ ಬಂದಿಲ್ಲ ಎನ್ನಲಾಗಿದೆ, ಇಂದು ಬೆಳಿಗ್ಗೆ ಅರ್ಚಕರು ನಿತ್ಯ ಪೂಜೆಗೆಂದು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಮುಲ್ಕಿ ಠಾಣಾಧಿಕಾರಿ ಕುಸುಮಾಧಾರ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
ವಿಶ್ವಕರ್ಮ ಸಮುದಾಯದ ಪುರಾತನ ಮಠ ಇದಾಗಿದ್ದು ಕಳೆದ ಎರಡು ವರ್ಷಗಳ ಹಿಂದೆ ನೂತನವಾಗಿ ನವೀಕರಣಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net