

ಸಿದ್ದಾಪುರ:ಪ್ರಯಾಣಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಇಬ್ಬರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಶಿರಸಿ ಬನವಾಸಿ ರಸ್ತೆ ಹಂಚಿನಕೇರಿಯ ಶಹೀದ್ ಇಸ್ಮಾಯಿಲ್ ಶೇಖ್, ಶಿವಮೊಗ್ಗ ಟಿಪ್ಪು ನಗರದ ಇರ್ಫಾನ್ ಪಾಷಾ ಬಂಧಿತರು.
ಶಿರಸಿಯಲ್ಲಿ ಬೈಕ್ ಅಪಹರಿಸಿದ್ದ ಇಬ್ಬರೂ ಶಿರಸಿ-ಕುಮಟಾ ನಡುವೆ ದೇವಿಮನೆ ಘಟ್ಟದಲ್ಲಿ ಕೋಳಿ ಮಾಂಸ ಸಾಗಿಸುತ್ತಿ ವಾಹನ ತಡೆದು ಹಣ ಕಿತ್ತುಕೊಂಡಿದ್ದರು.
ಇದನ್ನೂ ಓದಿ:ಸ್ನೇಹಿತನ ಪತ್ನಿ ಮೇಲೆ ಕಣ್ಣು ಹಾಕಿದ್ರಾ ಬಳ್ಳಾರಿ ಪಾಲಿಕೆ ಸದಸ್ಯ?! ಎಫ್‍ಐಆರ್ ದಾಖಲು
ಸಿದ್ದಪುರ ತಟ್ಟಿಕೈ ಕಂಚಿಕೈ ಬಳಿ, ಬೈಕ್ ಪ್ರಯಾಣಿಕರಿಗೆ ಚಾಕು ತೋರಿಸಿ ದರೋಡೆಗೆ ಯತ್ನಿಸುತ್ತಿರುವಾಗ ಸ್ಥಳೀಯರು ಹಿಡಿದು, ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.