ಕಳ್ಳನ ಬಂಧನ, 7.73 ಲಕ್ಷ ರೂ. ಮೌಲ್ಯದ ಮೊಬೈಲ್ ವಶ

Crime ( Arrest)
Published on

ಸಿಂದಗಿ: ಪಟ್ಟಣದಲ್ಲಿ ಕಳೆದ ಮೇ 25 ರಂದು ನಡೆದಿದ್ದ ಮೊಬೈಲ್ ಅಂಗಡಿ ಕಳ್ಳತನದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಬಸ್ ನಿಲ್ದಾಣದ ಎದುರಿನ ಓಂಕಾರ ಮೊಬೈಲ್ ಅಂಗಡಿಯ ಪತ್ರಾಸ್ ಕೊರೆದು, ಮೊಬೈಲ್ ಕಳ್ಳತನ ನಡೆದಿತ್ತು. ಪೊಲೀಸರು ಕಳ್ಳನ ಪತ್ತೆಗಾಗಿ ತಪಾಸಣೆಯಲ್ಲಿರುವಾಗ ಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಮುತ್ತು ಶಂಕ್ರಪ್ಪ ಆಸಂಗಿ (25) ಸಾ.ಮುತ್ತಗಿ, ತಾ.ಬ.ಬಾಗೇವಾಡಿ, ಹಾಲಿ ವಾಸ ಗಿರಿಸಾಗರ, ತಾ.ಬೀಳಗಿ, ಜಿ.ಬಾಗಲಕೋಟೆ ಎಂಬಾತನನ್ನು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣ ಬಯಲಿಗೆ ಬಂದಿದೆ.

ಮೊಬೈಲ್ ಅಂಗಡಿಯಲ್ಲಿ ಕಳ್ಳತನವಾದ ಅಂದಾಜು 7,73,500 ರೂ. ಕಿಮ್ಮತ್ತಿನ ಸ್ಯಾಮ್‌ಸಂಗ್, ಓ, ರಿಯಲ್‌ಮಿ, ಐ ಪೋನ್ ಹಾಗೂ ಇತರ ಕಂಪನಿಯ ಒಟ್ಟು 24 ಮೊಬೈಲ್‌ಗಳನ್ನು ಜಪ್ತ್ತಿ ಮಾಡಿದ್ದಾರೆ.

ಎಸ್ಪಿ ಎಚ್.ಡಿ.ಆನಂದಕುಮಾರ, ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ಡಿ.ಹುಲಗಪ್ಪ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಭೀಮಪ್ಪ ರಬಕವಿ ಅವರ ನೇತೃತ್ವದಲ್ಲಿ ಎಎಸ್‌ಐ ಎಂ.ಜಿ.ಪಾಟೀಲ, ಬಿ.ಎಲ್.ಪಟೇದ, ಆರ್.ಎಲ್.ಕಣ್ಣಮನಿ, ಎಸ್.ಪಿ.ಹುಣಸಿಕಟ್ಟಿ, ಎಸ್.ಡಿ.ಚಾವರ, ಎಸ್.ಎಸ್.ಕೊಂಡಿ, ಪಿ.ಕೆ.ನಾಗರಾಳ, ಎಸ್.ಡಿ.ದೊಡಮನಿ ಅವರ ತಂಡ ಆರೋಪಿಯನ್ನು ಬಂಧಿಸಿದೆ. ಪ್ರಕರಣ ಭೇದಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಮೆಚ್ಚಿ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net