ಕಳವಾಗಿದ್ದ ಐದು ಬೈಕ್ ಪತ್ತೆ ‘ಆರೋಪಿ ಬಂಧನ’

arrest
Published on

ರೋಣ: ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ ಐದು ಬೈಕ್‌ಗಳನ್ನು ಪೊಲೀಸರು ಪತ್ತೆ ಹಚ್ಚಿ ಅರೋಪಿಯನ್ನು ನ್ಯಠಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಹೊಳೆಆಲೂರಿನ ನಿವಾಸಿ ಗೋಪಾಲ ತಿಮ್ಮಣ್ಣ ಬಂಡಿವಡ್ಡರ ಎಂಬಾತನನ್ನು ಬಂಧಿಸಿ 2 ಲಕ್ಷ 20 ಸಾವಿರ ರೂ. ಮೌಲ್ಯದ ಐದು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಸ್‌ಪಿ ಬಿ.ಎಸ್. ನ್ಯಾಮಗೌಡರ, ನರಗುಂದ ಉಪವಿಭಾಗದ ಉಪಾಧಿಕ್ಷಕ ಬಿ.ಆರ್.ಪಾಟೀಲ, ಸಿಪಿಐ ಶಿವಾನಂದ ವಾಲಿಕಾರ ಮಾರ್ಗದರ್ಶನದಲ್ಲಿ ಪಿಎಸ್‌ಐ ಎಲ್.ಕೆ. ಜೂಲಕಟ್ಟಿ ನೇತೃತ್ವದಲ್ಲಿ ಸಿಬ್ಬಂದಿ ಹನಮಂತ ಹುಲ್ಲೂರ, ಎಸ್.ಬಿ.ಪವಾಡಿ, ಎಚ್.ಎಸ್ ಶಂಕ್ರಿ, ಕುಮಾರ ತಿಗರಿ, ಮಂಜುನಾಥ ಬಂಡಿವಡ್ಡರ, ಶಿವಕುಮಾರ ಹುಬ್ಬಳ್ಳಿ, ಯಲ್ಲಪ್ಪ ಬೇವಿನಮರದ, ಮುತ್ತಪ್ಪ ಬಾವಿ, ಗುರುರಾಜ ಬೂದಿಹಾಳ ಸಂಜೀವ ಕರಡೂರ ಕಾರ್ಯಾಚರಣೆ ಕೈಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net