ಕಳ್ಳನ ಬಂಧನ, ಎಂಟು ಬೈಕ್ ವಶ

26gataprabha1
ಘಟಪ್ರಭಾ ಠಾಣೆ ಪೊಲೀಸರು ಕಳ್ಳನಿಂದ ವಶಕ್ಕೆ ಪಡೆದ ಬೈಕ್‌ಗಳು.
Published on

ಘಟಪ್ರಭಾ: ಪಟ್ಟಣದ ಪೊಲೀಸರು ಶನಿವಾರ ಬೈಕ್ ಕಳ್ಳನನ್ನು ಬಂಧಿಸಿ, 2,95,000 ರೂ. ಮೌಲ್ಯದ ಒಟ್ಟು ಎಂಟು ಬೈಕ್ ವಶಕ್ಕೆ ಪಡೆದಿದ್ದಾರೆ. ದಂಡಾಪೂರ ಕ್ರಾಸ್‌ನಲ್ಲಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲೆ ಸಂಶಯಾಸ್ಪದ ರೀತಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ಬೈಕ್ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗೋಕಾಕ ಡಿ.ಎಸ್.ಪಿ. ಎಚ್.ಡಿ.ಮುಲ್ಲಾ ಮಾರ್ಗದರ್ಶನದಲ್ಲಿ ಘಟಪ್ರಭಾ ಪಿ.ಐ. ಬಸವರಾಜ ಕಾಮನಬೈಲ, ಅಪರಾಧ ವಿಭಾಗ ಪಿ.ಎಸ್.ಐ. ಎಂ.ಬಿ.ಬಿರಾದಾರ, ಕಾ.ಸು ವಿಭಾಗದ ಪಿ.ಎಸ್.ಐ ಎಸ್.ಆರ್.ಕಣವಿ, ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net