ಊರೆಲ್ಲ ಕದ್ದು ಕಾರವಾರಕ್ಕೆ ಬಂದಿದ್ದ ಐನಾತಿ ಕಳ್ಳರು ಅರೆಸ್ಟ್‌

thief
Published on

ಕಾರವಾರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ನಡೆಸಿದ್ದ ಇಬ್ಬರನ್ನು ಇಲ್ಲಿನ ಶಹರ ಠಾಣೆ ಪೊಲೀಸರು ಅಕಸ್ಮಾತ್ತಾಗಿ ಬಂಽಸಿದ್ದಾರೆ. ಹಾವೇರಿ ಜಿಲ್ಲೆಯ ನಾಗೇಂದ್ರ ಮಟ್ಟಿಯ ಇಕ್ಬಾಲ್ ಬಾಬಾಜಾನ್ ಸುದರ್ಜಿ, ವಿಜಯಪುರ ಜಿಲ್ಲೆಯ ಯೂನಸ್ ಅಹ್ಮದ್ ಶೇಖ್ ಬಂಽತರು. ಇಬ್ಬರ ವಿರುದ್ಧ ರಾಜ್ಯದ ವಿವಿಧೆಡೆ ಕಳ್ಳತನದ ಹಲವು ಪ್ರಕರಣಗಳು ದಾಖಲಾಗಿವೆ.

ಆಗಿದ್ದೇನು..?

ಎರಡು ದಿನಗಳ ಹಿಂದೆ ತಹಸೀಲ್ದಾರ್ ಕಚೇರಿಯಲ್ಲಿ ಯಾವುದೋ ದಾಖಲೆ ಪಡೆಯಲು ಆಗಮಿಸಿದ್ದ ಯುವಕ ತನ್ನ ಲ್ಯಾಪ್‌ಟಾಪ್ ಇದ್ದ ಬ್ಯಾಗನ್ನು ಗೋಡೆಯ ಮೇಲಿಟ್ಟು ದಾಖಲೆ ಹುಡುಕಾಟದಲ್ಲಿದ್ದ ಕ್ಷಣಮಾತ್ರದಲ್ಲಿ ಆತನ ಬ್ಯಾಗ್ ಎಗರಿಸಿ ಪರಾರಿಯಾಗಿದ್ದರು. ಹಿಂಬಾಲಿಸಿ ನೋಡಿದಾಗ ಡಿಸಿ ಕಚೇರಿಯ ಹಿಂದುಗಡೆ ಕಳ್ಳರು ಸಿಕ್ಕಿ ಬಿದ್ದಿದ್ದರು. ಸಾರ್ವಜನಿಕರೇ ಅವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಆದರೆ, ದೂರು ನೀಡಲು ಅವರು ಸಿದ್ಧರಿರಲಿಲ್ಲ. ನಂತರ ಶಹರ ಠಾಣೆ ಪೊಲೀಸರೇ ಪೊಲೀಸ್ ಆ್ಯಕ್ಟ್ನಂತೆ ಸ್ವಮೋಟೊ ಪ್ರಕರಣ ದಾಖಲಿಸಿಕೊಂಡು ತಹಸೀಲ್ದಾರರ ಮುಂದೆ ಹಾಜರುಪಡಿಸಿದ್ದಾರೆ.

ಆರೋಪಿಗಳ ಬೆರಳಚ್ಚು ಮಾದರಿ ಪಡೆದು, ಕ್ರೈ ಆ್ಯಂಡ್ ಕ್ರಿಮಿನಲ್‌ಟ್ರಾಕಿಂಗ್ ನೆಟ್ವರ್ಕ್ ಆ್ಯಂಡ್ ಸಿಸ್ಟಮ್(ಸಿಸಿಟಿಎನ್‌ಎಸ್)ನಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಯೂನಸ್ ಅಹಮದ್ ಶೇಖ್ ವಿರುದ್ಧ ದಾಂಡೇಲಿ, ಹುಬ್ಬಳ್ಳಿ, ಬೆಳಗಾವಿ ಗದಗ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ. 9 ಪ್ರಕರಣಗಳಲ್ಲಿ ಆದನಿಗೆ ಶಿಕ್ಷೆ ಕೂಡ ಆಗಿದೆ.

ಇಕ್ಬಾಲ್ ಬಾಬಾಜಾನ್ ವಿರುದ್ಧ ಹೊನ್ನಾವರ, ಬೈಂದೂರು, ಕಾರವಾರ ಶಹರ, ಧಾರವಾಡ ಸೇರಿ ವಿವಿಧೆಡೆ ಒಟ್ಟು 21 ಕಡೆ ಮನೆ, , ದೇವಸ್ಥಾನ, ಚೈನ್ ಕಳ್ಳತನ ಸೇರಿ ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ಶಿಕ್ಷೆಯೂ ಆಗಿದೆ. ಕೆಲ ದಿನ ಜೈಲೂಟ ಉಂಡು ಜಾಮೀನಿನ ಮೇಲೆ ಹೊರ ಬಂದ ಇಬ್ಬರು ಮತ್ತೆ ಅದೇ ಕಾರ್ಯದಲ್ಲಿ ತೊಡಗುತ್ತಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net