

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಹೊಸಯಲ್ಲಾಪುರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿರುವ ಕಸದ ಗುಡ್ಡಕ್ಕೆ ಮಂಗಳವಾರ ಬೆಂಕಿ ಹೊತ್ತಿಕೊಂಡು ವಿವಿಧ ಕಡೆಗಳಲ್ಲಿ ಇಡೀ ದಿನ ದಟ್ಟ ಹೊಗೆ ಆವರಿಸಿಕೊಂಡಿತ್ತು.
ಹೊಸಯಲ್ಲಾಪುರದ ಕಸದ ಗುಡ್ಡಕ್ಕೆ ಮೇಲಿಂದ ಮೇಲೆ ಬೆಂಕಿ ಹೊತ್ತಿಕೊಂಡು ಈ ರೀತಿ ಸಮಸ್ಯೆ ತಲೆದೋರುತ್ತಲೇ ಇದೆ. ಮಂಗಳವಾರವೂ ಮರುಕಳಿಸಿದ್ದರಿಂದ ಟೋಲ್‌ನಾಕಾ, ಜನ್ನತನಗರ, ವಿದ್ಯಾಗಿರಿ ಸುತ್ತಲಿನ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತ್ತು. ಹೊಗೆಯಿಂದ ದುರ್ವಾಸನೆ ಹರಡಿದ್ದರಿಂದ ಅಲ್ಲಿನ ನಿವಾಸಿಗಳು ಮನೆಗಳಲ್ಲಿ ಇರಲಾರದಂತಾಗಿತ್ತು.
ಇದರಿAದ ಆಕ್ರೋಶಗೊಂಡ ನಿವಾಸಿಗಳು ಸಂಜೆ ವೇಳೆಗೆ ಟೋಲ್ ನಾಕಾ ಪ್ರದೇಶದಲ್ಲಿ ಜಮಾವಣೆಗೊಂಡಿದ್ದರು. ಈ ಸಮಸ್ಯೆ ಹೋಗಲಾಡಿಸಲು ಪಾಲಿಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕೆಲ ಹೊತ್ತು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ವಿದ್ಯಾಗಿರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿದರು.