ಮೌಢ್ಯ-ಸಂಪ್ರದಾಯ ವಿರೋಧಿಗಳಾಗಿದ್ದರು

26 KMP 01
ಕಂಪ್ಲಿಯಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನ ಹಮ್ಮಿಕೊಂಡ ಕುವೆಂಪು ದಿನಾಚರಣೆ ಕಾರ್ಯಕ್ರಮದಲ್ಲಿ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಬಿ.ಸುನೀಲ್ ಮಾತನಾಡಿದರು. ಪ್ರಮುಖರಾದ ಜಿ.ಪ್ರಕಾಶ, ಷಣ್ಮುಖಪ್ಪ ಚಿತ್ರಗಾರ, ಟಿ.ನಿರಂಜನಸ್ವಾಮಿ ಇದ್ದರು.
Published on

ಕಂಪ್ಲಿ: ಕುವೆಂಪು ಸಾಹಿತ್ಯವನ್ನು ಅಂಕಗಳಿಕೆಗಾಗಿ ಓದದೆ ವೈಚಾರಿಕ ಪ್ರಜ್ಞೆ ಅರಿಯಲು ಅಧ್ಯಯನ ಮಾಡಬೇಕು ಎಂದು ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಬಿ.ಸುನೀಲ್ ಹೇಳಿದರು.

ಇಲ್ಲಿನ ಗಂಗಾಸಂಕೀರ್ಣದಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನ ಶನಿವಾರ ಹಮ್ಮಿಕೊಂಡಿದ್ದ ಕುವೆಂಪು ದಿನಾಚರಣೆ ನಿಮಿತ್ತ ಕುವೆಂಪು ವ್ಯಕ್ತಿತ್ವ ಹಾಗೂ ಸಾಹಿತ್ಯ ಚಿಂತನೆ ಕುರಿತು ಉಪನ್ಯಾಸ ನೀಡಿ, ಕುವೆಂಪು ಸಾಹಿತ್ಯದ ಹೆಬ್ಬಾಗಿಲುನಂತಿದ್ದು, ಅವರ ಸಾಹಿತ್ಯ ವರ್ತಮಾನ, ಭವಿಷ್ಯತ್ತಿನಲ್ಲೂ ಜೀವನಪ್ರೀತಿಯನ್ನು ಪ್ರೇರೇಪಿಸುತ್ತದೆ. ಕುವೆಂಪು ಸಾಹಿತ್ಯದಲ್ಲಿ ಸೃಜನಶೀಲತೆ, ವೈಚಾರಿಕತೆ, ಸಾಂಸ್ಕೃತಿಕ, ವೈಜ್ಞಾನಿಕ, ಸಾಮಾಜಿಕ ಮನೋಭಾವಗಳು ಅಡಕವಾಗಿವೆ. ಅವರು ನಾಸ್ತಿಕವಾದಿಯಲ್ಲ, ಅವರು ಮೌಢ್ಯ ಸಂಪ್ರದಾಯ ವಿರೋಧಿಗಳಾಗಿದ್ದರು ಎಂದರು.

ತಾಲೂಕು ಕಸಾಪ ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಮಾತನಾಡಿ, ಕುವೆಂಪು ವಿಚಾರವನ್ನು ಯುವಜನತೆ ಅರ್ಥೈಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಿದೆ. ಕುವೆಂಪು ಸಾಹಿತ್ಯ ವಿಶ್ವಸಾಹಿತ್ಯಕ್ಕೆ ನೀಡಿದ ವಿಶಿಷ್ಟ ಕೊಡುಗೆಯಾಗಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ, ರಾಮಸಾಗರದ ವೀರಶೈವ ಮುಖಂಡ ಟಿ.ನಿರಂಜನಸ್ವಾಮಿ, ಶಿಕ್ಷಕ ಮುದುಕಪ್ಪ ನೆಲಜೇರಿ ಮಾತನಾಡಿದರು. ಸಿಆರ್‌ಪಿ ಚಂದ್ರಯ್ಯ ಸೊಪ್ಪಿಮಠ ಕುವೆಂಪು ಕವಿತೆಗಳನ್ನು, ವರ್ತಕ ಅಶೋಕ ಕುಕನೂರು ಆಶುಕವಿತೆ ವಾಚಿಸಿದರು. ವಿದ್ಯಾರ್ಥಿ ಅಮೋಘವರ್ಷ ಕುವೆಂಪು ಜೀವನ ಕುರಿತು ಮಾತನಾಡಿದರು.

ಪ್ರತಿಷ್ಠಾನದ ಪದಾಧಿಕಾರಿಗಳಾದ ರಾಜು ಬಿಲಂಕರ್, ಬಂಗಿ ದೊಡ್ಡ ಮಂಜುನಾಥ, ಅಂಬಿಗರ ಮಂಜುನಾಥ, ಎಸ್.ಶ್ಯಾಮಸುಂದರರಾವ್, ವೀರಮ್ಮನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net