ಅಲ್ಪಸಂಖ್ಯಾತರ ಓಲೈಕೆಗೆ ಕೀಳಾಗಿ ಮಾತನಾಡುತ್ತಾರೆ

MP shettar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸಿಗರು ವೀರ ಸಾವರಕರ್ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಸಾವರಕರ್ ಅವರನ್ನು ಅವಹೇಳನ ಮಾಡದಿದ್ದರೆ ಕಾಂಗ್ರೆಸಿಗರಿಗೆ ಸಮಾಧಾನ ಇಲ್ಲ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಟೀಕಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರಕರ್ ಬಗ್ಗೆ ಸಚಿವ ದಿನೇಶ ಗುಂಡೂರಾವ್ ಹೇಳಿರುವುದನ್ನು ಖಂಡಿಸುತ್ತೇವೆ. ವೀರ ಸಾವರಕರ್ ಅವರು ಬ್ರಿಟಿಷರ ವಿರುದ್ಧ ದಿಟ್ಟ ಹೋರಾಟ ಮಾಡಿದವರು. ಅವರು ಪ್ರಬಲ ಹಿಂದುತ್ವವಾದಿ. ಅವರಿಗೆ ಬ್ರಿಟಿಷರು ವಿಧಿಸಿದ ಶಿಕ್ಷೆ ಸೋ ಕಾಲ್ಡ್ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರಿಗೂ ಇರಲಿಲ್ಲ. ಪದೇ ಪದೆ ಸಾವರಕರ್ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುವುದು ಅಕ್ಷಮ್ಯ ಎಂದರು.

ಕಾಂಗ್ರೆಸಿಗರು ಇದೇ ರೀತಿ ಮಾತನಾಡುತ್ತ ಇದ್ದರೆ ಜನರು ತಕ್ಕ ಪಾಠ ಕಲಿಸುತ್ತಾರೆ. ದೇಶಾದ್ಯಂತ ಮುಸ್ಲಿಮರನ್ನು ಪ್ರತ್ಯೇಕವಾಗಿಸುವ ಪ್ರಯತ್ನಗಳಾಗುತ್ತಿವೆ. ಇದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ಇದರಿಂದಾಗಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net